ಬೆಂಗಳೂರು: ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಸರ್ವೋದಯ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡದರು.
ಎಐಸಿಸಿ ಅಧ್ಯಕ್ಷ ಆದ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಅವರು ಮೊದಲನೆಯ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಶುಭಕೋರಿ ಮಾತನಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಕಡೆಯಿಂದ ಖರ್ಗೆ ಅವರಿಗೆ ಅದ್ಧೂರಿ ಸ್ವಾಗತ ಮಾಡಿದ್ದೇವೆ. ನಿಜಲಿಂಗಪ್ಪ ಅವರ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ನಮ್ಗೆ ಕೆಲವು ಸಲಹೆ ನೀಡಿದ್ದಾರೆ. ಅವರ ಸಲಹೆ ಅಂತೆ ನಾವು ಕೆಲಸ ಮಾಡುತ್ತೇವೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಂಗೆ ಸಂತೋಷ ಆಗುತ್ತದೆ ಎಂದು ಖರ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಖರ್ಗೆ ಅವರನ್ನ ಖುಷಿ ಪಡಿಸುತ್ತೇವೆ.
ರಾಜ್ಯ ಬಿಜೆಪಿ ಸಂಕಲ್ಪ ಯಾತ್ರೆ ಮಾಡ್ತಿದ್ದಾರೆ. ಆದ್ರೆ ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ತಗೆದು ಹಾಕುವ ಸಂಕಲ್ಪ ಮಾಡಿದ್ದಾರೆ. ಖರ್ಗೆ ಅವರು ಚುನಾವಣೆ ಸಮಯದಲ್ಲಿ ಅಧ್ಯಕ್ಷರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೇ ನಾನು ಕೆಪಿಸಿಸಿ ಕಡೆಯಿಂದ ಹೇಳುತ್ತೇನೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ನಾವು ತರುತ್ತೇವೆ ಎಂದು ಮಾತು ಸಿದ್ದರಾಮಯ್ಯ ಅವರು ನೀಡಿದರು.
ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಆದ್ರೆ ಒಟ್ಟಿಗೆ ಚುನಾವಣೆಗೆ ಹೋಗಿ ಬಹುಮತ ತರುತ್ತೇವೆ. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇದೆ. 25 ಸಾವಿರ ಕೋಟಿ ಹಣ ಗುತ್ತಿಗೆದಾರುಗೆ ಕೊಡಬೇಕಾದ ಬಿಲ್ ಬಾಕಿ ಇದೆ. ಈ ಹಣಕ್ಕಾಗಿ 40% ಕಮಿಷನ್ ಕೊಡಬೇಕಂತ್ತೆ ಗುತ್ತಿಗೆದಾರರು ಹೇಳಿದ್ದಾರೆ.
ಇನ್ಸ್ಪೆಕ್ಟರ್ ನಂದೀಶ ಹೃದಯಾಘಾತದಿಂದ ಸಾವು ಆಗಿದೆ. 70 ರಿಂದ 80 ಲಕ್ಷ ಹಣ ಕೊಟ್ಟು ನಂದೀಶ್ ಪೋಸ್ಟಿಂಗ್ ತಗೆದುಕೊಂಡಿದ್ದಾರೆ. ಹೀಗಂತ ನಾವು ಹೇಳಿಲ್ಲ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ 70-80 ಲಕ್ಷ ಪೋಸ್ಟಿಂಗ್ ತಗೆದುಕೊಂಡು ಬಂದ ಮೇಲೆ ಹೃದಯಾಘಾತ ಆಗದೇ ಮತ್ತೇನಾಗುತ್ತೆ ಎಂದು ಹೇಳಿದ್ದಾರೆ. ಕೂಡಲೇ ಸಿಎಂ ಮತ್ತು ಗೃಹ ಸಚಿವರು ರಾಜಿನಾಮೆ ನೋಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರೈತರ ಕೆಲಸಗಳು ನಡೆಯುತ್ತಿಲ್ಲ. ನಮ್ಮ ನಾಯಕ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡ್ತಿದ್ದಾರೆ. ಈ ಪಾದಯಾತ್ರೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದೆ. ಖರ್ಗೆ ಅವರೇ ನೀವು ಕರ್ನಾಟಕದವರು. ನೀವು ಹಿಂದೆ ಯಾವ ಇಲಾಖೆಯಲ್ಲಿ ಕೆಲಸ ಮಾಡಿದೀರಾ. ಆ ಇಲಾಖೆಯಲ್ಲಿ ನಿಮ್ಮ ಹೆಜ್ಜೆ ಗುರುತು ಬಿಟ್ಟು ಹೊಗಿದೀರಾ. ಖರ್ಗೆ ಅವರೇ ನೀವು ಒಬ್ಬ ಸ್ವಾಭಿಮಾನಿ ನಾಯಕ, ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಆಗಿರುವುದು ಕರ್ನಾಟಕ ಹೆಮ್ಮೆಯ ವಿಚಾರ ನಿಮ್ಮ ಎಚ್ಚರಿಕೆಯ ಮಾತುಗಳಂತೆ ನಾವು ನಡೆದುಕೊಂಡ ಹೊಗ್ತಿವಿ ಎಂದು ಸಿದ್ದರಾಮಯ್ಯ ಅವರು ವಾಗ್ದಾನ ಮಾಡಿದರು.