ಬೆಂಗಳೂರು:ಶಾಸಕ ತಿಪ್ಪಾರೆಡ್ಡಿ ಹನಿಟ್ರ್ಯಾಪ್‌ಗೆ ಯತ್ನ ಪ್ರಕರಣಕ್ಕೆ ಸಂಬಮದಿಸಿದಂತೆ,ಅಲರ್ಟ್ ಆದ ಶಾಸಕರು ಹಾಗೂ ರಾಜಕೀಯ ಮುಖಂಡರು.ಚುನಾವಣೆ ಹತ್ತಿರ ಬರ್ತಿದ್ದಂಗೆ ಮುಖಂಡರಲ್ಲಿ ಢವಢವ ಶುರುವಾಗಿದೆ.
ಇನ್ನು ಆ್ಯಂಡ್ರಾಯ್ಡ್ ಬಿಟ್ಟು ಬೇಸಿಕ್ ಮೊಬೈಲ್ ಬಳಕೆ ಶುರುಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಮುಖಂಡರ ಟ್ರ್ಯಾಪ್‌ಗೆ ಯತ್ನ. ಅಶ್ಲೀಲವಾಗಿ ಕಾಣಿಸಿಕೊಂಡು ಯುವತಿಯಿಂದ ವಿಡಿಯೋ ಕಾಲ್. ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ಬ್ಲಾಕ್‌ಮೇಲ್ ಯತ್ನ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಾಳಯದಲ್ಲಿ ಹೈ ಅಲರ್ಟ ಆಗಿದ್ದಾರೆ.
ಆ್ಯಂಡ್ರಾಯ್ಡ್ ಮೊಬೈಲ್ ಇದ್ರೆ ಅಲ್ವಾ ವಿಡಿಯೋ ಕಾಲ್ ಅಂತ ಬೇಸಿಕ್ ಮೊಬೈಲ್ ಬಳಸಿದ್ರೆ ವಿಡಿಯೋ ಕಾಲ್ ಭಯ ಇರಲ್ಲ. ಹಾಗಾಗಿಯೇ ಆ್ಯಂಡ್ರಾಯ್ಡ್ ಬಿಟ್ಟು ಬೇಸಿಕ್ ಫೋನ್‌ಗೆ ಶಿಫ್ಟ್ ಆಗಿದ್ದಾರೆ. ಕಳೆದ ಆರು ತಿಂಗಳಿನಿಂದ ನಡೀತಿದೆ ಟ್ರ್ಯಾಪ್ ಯತ್ನ
ಎದುರಾಳಿಗಳನ್ನು ಮಣಿಸಲು ಖತರ್ನಾಕ್ ಪ್ಲಾನ್. ಯುವತಿಯನ್ನು ಬಳಸಿ ರಾಜಕೀಯ ಮುಖಂಡರಿಗೆ ದಾಳ.
ಮೊದಲು ಚಾಟ್ಯಿಂಗ್, ನಂತರ ವಿಡಿಯೋ ಕಾಲ್. ವಿಡಿಯೋ ಕಾಲ್ ವೇಳೆ ನಗ್ನ ಅಥವಾ ಅರೆನಗ್ನ ಸ್ಥಿತಿಯಲ್ಲರುವ ಯುವತಿಯರು.
ಇತ್ತ ಕಡೆ ಕಾಲ್ ರಿಸೀವ್ ಮಾಡ್ತಿದ್ದಂಗೆ ಸ್ಕ್ರೀನ್ ರೆಕಾರ್ಡ್ ಆಗುತ್ತೆ. ನಂತ್ರ ಇದೇ ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಆರಂಭವಾಗುತ್ತದೆ. ವರ್ಚಸ್ಸಿಗೆ ಧಕ್ಕೆಯಾಗುತ್ತೆ ಅನ್ನೋ ಭಯದಲ್ಲಿರುವ ಮುಖಂಡರು. ಇದೇ ಕಾರಣಕ್ಕೆ ಆ್ಯಂಡ್ರಾಯ್ಡ್ ಫೋನ್‌ಗೆ ಗುಡ್‌ಬೈ.