Monday, December 23, 2024

ಕಾಣೆಯಾದ ದಿನವೇ ರೇಣುಕಾಚಾರ್ಯ ಸಹೋದರ ಪುತ್ರನಿಗೆ ಹಲವು ಬಾರಿಗೆ ಕರೆ, ಮೆಸೇಜ್​.!

ಬೆಂಗಳೂರು; ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರಶೇಖರ್​ ಸಾವು ಹಿನ್ನಲೆಯಲ್ಲಿ ಕಾಣೆ ಆದ ದಿನವೇ ಒಂದೇ ಮೊಬೈಲ್​ನಿಂದ ಹಲವಾರು ಬಾರಿ ಕರೆ ಹಾಗೂ ಮೆಸೇಜ್​ ಬಂದಿವೆ.

ಕಾಣೆಯಾದ ದಿನಂದಿಂದ ಚಂದ್ರಶೇಖರ್​ ಐದನೇ ದಿನಕ್ಕೆ ಭದ್ರ ಕಾಲುವೆಯೊಂದರಲ್ಲಿ ಕಾರಿನ ಜತೆಗೆ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಚಂದ್ರು ಮೊಬೈಲ್​ಗೆ ಬಂದ ಕರೆ ಮಾಹಿತಿ ಪರಿಶೀಲನೆ ಮಾಡಿದ ವೇಳೆ ಚಿಕ್ಕಮಗಳೂರಿನ ಕೊಪ್ಪದ ವ್ಯಕ್ತಿಯೊಬ್ಬ ಹಲವು ಬಾರಿ ಕರೆ ಹಾಗೂ ಮೆಸೇಜ್​ ಮಾಡಿದ್ದಾನೆ.

ಚಂದ್ರು ಕಾಣೆಯಾದ ದಿನದ ರಾತ್ರಿ 10 ಗಂಟೆಯಿಂದ ನಿರಂತರವಾಗಿ ಒಂದೇ ನಂಬರ್ ನಿಂದ ಕರೆ ಬಂದಿದೆ. ಆ ನಂಬರ್ ಬಗ್ಗೆ ಮಾಹಿತಿ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಮೈಲ್​ ಕರೆಯ ಬಗ್ಗೆ ಸಿಡಿಆರ್ ತೆಗೆಸಿ ನೋಡಿದಾಗ ಅಂದು ರಾತ್ರಿ 10 ಗಂಟೆಯಿಂದ ಒಂದೇ ನಂಬರ್ ನಿಂದ ಕರೆ‌ ಬಂದಿದೆ. ರಾತ್ರಿ 10 ಗಂಟೆವರೆಗೂ ಗೌರಿ ಗದ್ದೆಯ ವಿನಯ್ ಗುರೂಜಿ ಆಸ್ಪತ್ರೆಯಲ್ಲಿದ್ದ ಚಂದ್ರು. ಅ ಕರೆ ಮಾಡಿದವರಾದರೂ ಯಾರು ಆತನಿಗೂ ಚಂದ್ರುಗೆ ಏನು ವ್ಯವಹಾರ ಎನ್ನುವುದು ನಿಗೂಢವಾಗಿದೆ.

RELATED ARTICLES

Related Articles

TRENDING ARTICLES