Wednesday, January 22, 2025

ಗುಂಡಿನ ದಾಳಿಯಿಂದ ಪಾರು ಮಾಡಿದ ವ್ಯಕ್ತಿಗೆ ಶ್ಲಾಘಿಸಿದ ಇಮ್ರಾನ್ ಖಾನ್​ ಮಾಜಿ​ ಪತ್ನಿ.!

ಇಸ್ಲಾಮಾಬಾದ್ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್, ಗುಜ್ರಾನ್‌ವಾಲಾದಲ್ಲಿ ಪಕ್ಷದ ಲಾಂಗ್ ಮಾರ್ಚ್‌ನಲ್ಲಿ ಮಾಜಿ ಪ್ರಧಾನಿಯ ಮೇಲಿನ ದಾಳಿಯನ್ನು ವಿಫಲಗೊಳಿಸಿದ ವ್ಯಕ್ತಿಯನ್ನು ಶ್ಲಾಘಿಸಿದರು.

ಇಮ್ರಾನ್​ ಖಾನ್​ ಅವರ ಹತ್ಯೆ ಯತ್ನದ ನಂತರ ಮೊನ್ನೆ ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ದ ವ್ಯಕ್ತಿಯನ್ನ ಇಮ್ರಾನ್​ ಖಾನ್ ಮಾಜಿ ಪತ್ನಿ ಹಾಡಿ ಹೊಗಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿದ ಇಮ್ರಾನ್​ ಮಾಜಿ ಪತ್ನಿ, ದಾಳಿಕೋರನನ್ನು ಹಿಡಿದ ವ್ಯಕ್ತಿಗೆ ತಮ್ಮ ಕೃತಜ್ಞತೆ ತಿಳಿಸಿದರು. ನಾವು ಭಯಪಡುವ ಸುದ್ದಿ. ದೇವರಿಗೆ ದಯೆಯಿಂದ ಇಮ್ರಾನ್​ ಅವರು ಬದುಕುಳಿದಿದ್ದಾರೆ. ಬಂದೂಕುಧಾರಿಗಳಿಂದ ಇಮ್ರಾನ್​ ಪಾರು ಮಾಡಿದ ವ್ಯಕ್ತಿಗಳಿಗೆ ಧನ್ಯವಾದ ತಿಳಿಸಿದರು.

ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಧಾನಿಯವರ ಆರೋಗ್ಯದ ಮಾಜಿ ಸಹಾಯಕ ಡಾ ಫೈಸಲ್ ಸುಲ್ತಾನ್ ಹೇಳಿದ್ದಾರೆ. ಇಮ್ರಾನ್​ ಖಾನ್​ ಅವರ ಕಾಲುಗಳಲ್ಲಿ ಗುಂಡುಗಳ ತುಣುಕುಗಳಿದ್ದು, ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಪಾಕಿಸ್ತಾನದ ಡಾನ್​ ನ್ಯೂಸ್​​ ವರದಿ ಮಾಡಿದೆ.

RELATED ARTICLES

Related Articles

TRENDING ARTICLES