ಬೆಂಗಳೂರು: ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದು, ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಇರುವ 500 ಕೋಟಿ ರೂ ನೋಟು ಬಿಡುಗಡೆ ಮಾಡಿದೆ.
ಈ ನೋಟಿನಲ್ಲಿ ಕೆಎಸ್ ಈಶ್ವರಪ್ಪ ಅವರ ಚಿತ್ರವಿದ್ದು, ಭ್ರಷ್ಟ ಜನತಾ ಪಕ್ಷ ಅಂದ್ರ ಕುದುರೆ ವ್ಯಾಪಾರ, ಬಿಜೆಪಿ ಸೇರಲು ಪ್ರತಿ ಶಾಸಕರಿಗೆ 500 ಕೋಟಿ ರೂ ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ಈ ನೋಟಿನಲ್ಲಿ ಬರೆಯಲಾಗಿದೆ.
ರಾಜ್ಯ ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ಹೆಚ್ಚಲ್ಲ ಅಲ್ಲವೇ, ಈಶ್ವರಪ್ಪ ಹಾಗೂ ರಾಜ್ಯ ಬಿಜೆಪಿ ನೋಟು ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲಕ್ಕೆ 500 ಕೋಟಿ ಎಣಿಸುವುದಕ್ಕಾ, 40% ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? 500 ಕೋಟಿ ರೂ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇನ್ನು ಕೆ.ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ 500 ಕೋಟಿ ರೂ ಆಮಿಷ ಒಡ್ಡಿದ್ದೆ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯ, ಅನುಮಾನಗಳೂ ಇಲ್ಲ. ತೆಲಂಗಾಣದಲ್ಲಿ 150 ಕೋಟಿ ರೂ ನೀಡಿ ಶಾಸಕರ ಡೀಲ್‌ನಲ್ಲೂ ನಿಮ್ಮದೇ ನೋಟ್ ಎಣಿಸುವ ಮಿಷನ್ ಕೆಲಸ ಮಾಡಿತ್ತು ಅಲ್ವೇ? 40% ಕಮಿಷನ್ ಲೂಟಿಯನ್ನು ಕರ್ನಾಟಕದ ನಂತರ ತೆಲಂಗಾಣದಲ್ಲಿ ಇನ್ವೆಸ್ಟ್ ಮಾಡ್ತಿದೀರಾ ಎಂದು ರಾಜ್ಯ ಬಿಜೆಪಿ ಹಾಗೂ ಈಶ್ವರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.