Monday, December 23, 2024

ಕಾರ್ತಿಕ ಮಾಸದಲ್ಲೇ ಕತ್ತಲಲ್ಲಿ ಕುಳಿತ ಚಾಮರಾಜೇಶ್ವಸ್ವಾಮಿ

ಚಾಮರಾಜನಗರ: ಕಾರ್ತಿಕ ಮಾಸದಲ್ಲೇ ಕತ್ತಲಲ್ಲಿ ಕುಳಿತ ಚಾಮರಾಜೇಶ್ವಸ್ವಾಮಿ. ಕಾರ್ತಿಕ ಮಾಸದಲ್ಲಿ ಹೆಚ್ಚು ದೀಪಗಳಿಂದ ಕಂಗೊಳಿಸುವ ಈಶ್ವರನ ದೇವಸ್ಥಾನಗಳು.

ಚಾಮರಾಜನಗರದಲ್ಲೇ ಇಂದು ವಿದ್ಯುತ್ ಕಟ್, ಭಕ್ತಾದಿಗಳಿಗೆ ಕತ್ತಲಲ್ಲಿ ಈಶ್ವರನ ದರ್ಶನವಾಗಿದೆ.ಮೂಕ ಪ್ರೇಕ್ಷಕರಾಗಿ ನಿಂತ ಪುರೋಹಿತರು, ಬಂದ ಭಕ್ತರು ದರ್ಶನ ಸಿಗದೇ ವಾಪಾಸ್ಸಾಗಿದ್ದಾರೆ. ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಚೆಸ್ಕಾಂ ಅಧಿಕಾರಿಗಳು.

ಹಲವು ತಿಂಗಳಿಂದ‌ ವಿದ್ಯುತ್ ‌ಬಿಲ್ ಕಟ್ಟದ ಹಿನ್ನಲೆ ಇಂದು ದೇವಸ್ಥಾನದ ವಿದ್ಯುತ್ ಸಂಪರ್ ಕಡಿತಗೊಳಿಸಿರುವ ಚೆಸ್ಕಾಂ. ದೇವಸ್ಥಾನದ ಬಗೆ ನಿರ್ಲಕ್ಷ್ಯ, ಅಧಿಕಾರಿಗಳು ಹಾಗೂ‌ ಜನಪ್ರತಿನಿಧಿಗಳ ವಿರುದ್ಧ ಭಕ್ತರ ‌ಆಕ್ರೋಶ.ಹಿಂದೆಂದು ಈ ರೀತಿ ವಿದ್ಯುತ್ ಸಂಪರ್ಕ ಕಡಿತವಾಗಿಲ್ಲ, ಇದು‌ ಇತಿಹಾಸದಲ್ಲೇ ಮೊದಲು ಎನ್ನುತ್ತಿರುವ ಜನತೆ.ಕಾರ್ತಿಕ ಮಾಸದಲ್ಲಿ ದೇವಸ್ಥಾನವೆಲ್ಲ ದೀಪದಿಂದ ಬೆಳಗಬೇಕೆಂದರೆ ಇಲ್ಲಿ ಕತ್ತಲಲ್ಲಿ ಈಶ್ವರ.

RELATED ARTICLES

Related Articles

TRENDING ARTICLES