ಬೆಂಗಳೂರು: ಇಂದು ಮಾಧ್ಯಮದವರೊಮದಿಗೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ ರವರು ಮುಖ್ಯಮಂತ್ರಿ ಬೊಮ್ಮಾಯಿ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವರು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಶಿಷ್ಯ ವೇತನ ಮರುಪಾವತಿ ಬಿಡುಗಡೆಯಾಗ ಬಗ್ಗೆ ವರದಿಯಾಗಿತ್ತು.ಹೀಗಾಗಿ ಸಿಎಂ 150 ಕೋಟಿ ಶಿಷ್ಯ ವೇತನ ನೀಡಲು ಹಣ ಬಿಡಿಗಡೆ ಮಾಡಿದ್ದಾರೆ. ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ.100 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.
ವಸತಿ ನಿಲಯಗಳ ದುರಸ್ತಿ ಬಹಳ ವರ್ಷದಿಂದ ಬಾಕಿ ಇತ್ತು. ಅದಕ್ಕಾಗಿ 150 ಕೋಟಿ ಬಿಡುಗಡೆ ಮಾಡಲಾಗಿದೆ. ಪಿಹೆಚ್‌ಡಿ ಪದವಿ ಮಾಡುವವರಿಗೆ 10ಕೋಟಿ ಶಿಷ್ಯ ವೇತನ ಬಿಡುಗಡೆ ಮಾಡಿದ್ದಾರೆ. ಸಿಎಂ ಒಟ್ಟು 410 ಕೋಟಿ ಹಿಂದುಳಿದ ವರ್ಗಗಳಿಗೆ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸ್ತೇನೆ.
ಎಲ್ಲಾ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗೆ ಅನುಕೂಲ ಆಗಿದೆ. ಸುಮಾರು 2,400 ಹಾಸ್ಟೆಲ್ ನಮ್ಮಇಲಾಖೆಯಿಂದ ನಡೆಸಲಾಗ್ತಿದೆ.
ಎಲ್ಲೆಲ್ಲಿ ಹಾಸ್ಟೆಲ್ ವ್ಯವಸ್ಥೆ ಇದೆ ಅಲ್ಲಿ ಮೂಲಭೂತ ಸೌಕರ್ಯ ನೀಡಲಾಗ್ತಿದೆ. 25% ವಿದ್ಯಾರ್ಥಿಗಳನ್ನ ಹೆಚ್ಚಿಗೆ ತೆಗೆದುಕೊಳ್ಳಲು ಅವಕಾಶ. 35 ಸಾವಿರ ವಿದ್ಯಾರ್ಥಿಗಳನ್ನ ಸೇರಿಸಿಕೊಳ್ಳಲು ಸಾಧ್ಯವಾಗಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆ.ಇದರಿಂದ ಹಿಂದುಳಿದ ವರ್ಗಗಳ ಇಲಾಖೆಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ.