ಕಾರವಾರ : ನಿನ್ನೆ ರಾಜ್ಯಾದ್ಯಂತ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಹಾಕಿದ್ದ ಕನ್ನಡ ಕಟೌಟ್ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಕಾರವಾರ ಜಿಲ್ಲೆಯ ಕುಮಟ ಪಟ್ಟಣದಲ್ಲಿ ಈ ಕೃತ್ಯ ಎಸಗಲಾಗಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಪಕ್ಷದ ಮುಖಂಡರು ಶುಭಕೋರಿ ಕಟ್ ಔಟ್ ಹಾಕಿದ್ರು. ಕುಮಟ ಶಾಸಕ ದಿನಕರ ಶೆಟ್ಟಿ ಕಟ್ ಔಟ್ ಹೊರತು ಪಡಿಸಿ ಉಳಿದೆಲ್ಲಾ ಮುಖಂಡರ ಕಟ್ ಔಟ್ಗಳನ್ನು ಕಿತ್ತು ಕಸದ ಬುಟ್ಟಿಗೆ ಹಾಕಿ ಕಿಡಿಗೇಡಿಗಳು ದರ್ಪ ಮೆರೆದಿದ್ದಾರೆ.
ಇನ್ನು, ಹಾಲಿ ಶಾಸಕರ ಬೆಂಬಲಿಗರೇ ಈ ಕೃತ್ಯ ನಡೆಸಿರುವ ಬಗ್ಗೆ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಅನುಮಾನ ವ್ಯಕ್ತಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಕಟ್ ಔಟ್ಗಳಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಕರವೇ ಒತ್ತಾಯಿಸಿದೆ.