ಬೆಂಗಳೂರು: ಇಂದು ನಾಡಿನ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಬಹಲ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕಂಠೀರವ ಸ್ಟೇಡಿಯಂನಲ್ಲಿ, ರಿಜ್ವಾನ್ ಅರ್ಷದ್ ಹೇಳಿಕೆಗೆ ಕಾರ್ಯಕ್ರಮದಲ್ಲಿದ್ದ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ರಿಜ್ವಾನ್ ಅರ್ಷದ್ ರವರು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ಕನ್ನಡ ಜಾಗ್ರತೆ ಆಗುತ್ತದೆ. ಇದು ಯಾಕೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಕೇಂದ್ರದಲ್ಲಿ ಉದ್ಯೋಗಕ್ಕಾಗಿ ಪರೀಕ್ಣೆಗಳಲ್ಲಿ ಹಿಂದಿ, ಇಂಗ್ಲೀಷ್ ಮಾತ್ರ ಕಡ್ಡಾಯವಾಗಿದೆ.
ಇದರಿಂದ ಕನ್ನಡಿಗರಿಗೆ ಅನ್ಯಾವಾಗಿದೆ. ಇದು ಅನ್ಯಾಯದ ಪರಮಾವಧಿ. ಸಿಆರ್ಪಿ ಎಫ್ ಸೇರಿದಂತೆ ಕಾನ್ಸ್ ಟೇಬಲ್ ಹುದ್ದೆಕೂಡ ಕನ್ನಡಿಗರಿಂದ ಕಸಿಯಲಾಗಿದೆ. ಸಾವಿರಾರು ಹುದ್ದೆಗಳಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಹಿಂದಿ ಏರಿಕೆಯ ಹಠಮಾರಿ ಧೋರಣೆ ಕೈ ಬಿಡಬೇಕು. ಭಾಷಾ ತಾರಾತಮ್ಯವನ್ನ ಗಟ್ಟಿ ದ್ವನಿಯಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.