Monday, December 23, 2024

ಇನ್ಮುಂದೆ ಮೆಟ್ರೋ ಟಿಕೆಟ್​ಗಾಗಿ ಸರತಿ ಸಾಲುಗಳಲ್ಲಿ ನಿಲ್ಲಬೇಕಿಲ್ಲ.!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕನ್ನಡ ರಾಜ್ಯೋತ್ಸವ ದಿನದಿಂದ ಬಿಎಂಆರ್​ಸಿಎಲ್​(ಬೆಂಗಳೂರು ಮೆಟ್ರೋ ಮಂಡಳಿ) ಗುಡ್​ನ್ಯೂಸ್​ ನೀಡಿದೆ.

ನಾಳೆ(ನವೆಂಬರ್ 1) ಯಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪುಯಾಣಿಕರಿಗೆ ಗುಡ್​ನ್ಯೂಸ್​ ನೀಡಿ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಈ ದಿನದಿಂದ ಸ್ಮಾರ್ಟ್ ಫೋನ್ ಹೊಂದಿರುವ ಮೆಟ್ರೋ ಪಯಾಣಿಕರು ಟೋಕನ್ ಖರೀದಿಸಲು ಟಿಕೆಟ್‌ ಕೌಂಟರ್‌ಗಳ ಮುಂದೆ ನಿಲ್ಲುವ ಅಗತ್ಯವಿರುವುದಿಲ್ಲ. ಮೊಬೈಲ್​ ಇದ್ದರೆ ಸಾಕು ಎಂದಿದೆ.

ಇನ್ಮುಂದೆ ಮೆಟ್ರೋ ಪ್ರಯಾಣಿಕರು ಮೊಬೈಲ್​ ಮೂಲಕ ಕ್ಯೂಆರ್ ಕೋಡ್ ಬಳಸಿ ಟಿಕೆಟ್​ ಪಡೆಯಬಹುದು ಎಂದು ನಮ್ಮ ಮೆಟ್ರೋ ಮಂಡಳಿ ಹೇಳಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಕ್ಯೂಆರ್ ಕೋಡ್ ಮೂಲಕ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಅವಕಾಶ ನೀಡಿದೆ.

ಇನ್ನು ಟಿಕೆಟ್​ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ ಪೋನ್​ ಮುಖಾಂತರ ನಮ್ಮ ಮೆಟ್ರೋ ಆ್ಯಪ್​ನ್ನ ಪ್ಲೇ ಸ್ಕೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು.

ವಾಟ್ಸ್ ಆಪ್ (ಅಪ್ಲಿಕೇಶನ್)

ಅಧಿಕೃತ ಬಿಎಂಆರ್‌ಸಿಎಲ್ ನ ವಾಟ್ಸಾಪ್​ ಚಾಟ್‌ ಬಾಟ್ ಮೊಬೈಲ್ ಸಂಖ್ಯೆ 8105556617 ಅನ್ನು ಮೊಬೈಲ್ ನಲ್ಲಿ ಸೇವ್ ಮಾಡಿ “ಹಾಯ್” ಎಂಬ ಸಂದೇಶವನ್ನು, ಕಳುಹಿಸುವ ಮೂಲಕ OF ಟಿಕೆಟ್‌ಗಳನ್ನು ಖರೀದಿಸಲು ಚಾಟ್​ಬಾಟ್ ನೊಂದಿಗೆ ಸಂವಹನವನ್ನು ಪ್ರಾರಂಭಿಸಬಹುದು. ಆಂಡ್ರಾಯ್ಡ್ ಮತ್ತು ಐಫೋನ್​ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.

ವಾಟ್ಸಪ್​​ (WhatsApp) ಚಾಟ್‌ಬಾಟ್‌ (chatbot) ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು:

  • ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳು
  • ಕ್ಯೂಆರ್​ ಕೋಡ್​​ ಟಿಕೆಟ್‌ಗಳ ಖರೀದಿ
  • ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಗಳ ರೀಚಾರ್ಜ್
  • ಜರ್ನಿ ಪ್ಲಾನರ್​

ಪ್ರಸ್ತುತ ವುಯಾಣಿಕರ ಸ್ಥಳದ ಹತ್ತಿರವಿರುವ ಮೆಟ್ರೋ ನಿಲ್ದಾಣದ ಮಾಹಿತಿ, ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ, ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ

  •  ಗ್ರಾಹಕರ ಪ್ರತಿಕ್ರಿಯೆ

RELATED ARTICLES

Related Articles

TRENDING ARTICLES