Sunday, January 19, 2025

ಜಿಂಬಾಬ್ವೆ ವಿರುದ್ದ ಬಾಂಗ್ಲಾದೇಶಗೆ ಜಯ

ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ದ ಬಾಂಗ್ಲಾದೇಶ ತಂಡವು 3 ರನ್‌ಗಳ ರೋಚಕ ಜಯ ಸಾಧಿಸಿದೆ.

ಬಾಂಗ್ಲಾದೇಶ ನೀಡಿದ್ದ 151 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು 8 ವಿಕೆಟ್‌ ಕಳೆದುಕೊಂಡು 147 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇಲ್ಲಿನ ಗಾಬಾ ಮೈದಾನದಲ್ಲಿ ಬಾಂಗ್ಲಾದೇಶ ನೀಡಿದ್ದ 151 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡಕ್ಕೆ ಆರಂಭದಲ್ಲೇ ಬಾಂಗ್ಲಾ ವೇಗಿಗಳು ಆರಂಭದಲ್ಲೇ ಶಾಕ್ ನೀಡಿದ್ದಾರೆ.

ಮೊದಲ ಓವರ್‌ನಲ್ಲೇ ಟಸ್ಕಿನ್ ಅಹಮದ್ ಆರಂಭಿಕ ಬ್ಯಾಟರ್‌ ವೆಸ್ಲೆ ಮದೆವೆರೆ 4 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಕ್ರೇಗ್ ಎರ್ವಿನ್‌ 8 ರನ್‌ ಬಾರಿಸಿ ಟಸ್ಕಿನ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಿಲ್ಟನ್ ಶುಂಬಾ ಕೂಡಾ 8 ರನ್ ಬಾರಿಸಿ ಮುಷ್ತಾಫಿಜುರ್ ರೆಹಮಾನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಸಿಕಂದರ್ ರಾಜಾ ಖಾತೆ ತೆರೆಯುವ ಮುನ್ನವೇ ಟಸ್ಕಿನ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು.

RELATED ARTICLES

Related Articles

TRENDING ARTICLES