Monday, December 23, 2024

ವಿಜಯಪುರದಲ್ಲಿ ಮುಗಿಲು ಮುಟ್ಟಿದ ರೈತರ ಪ್ರತಿಭಟನೆ

ವಿಜಯಪುರ: ಈಗಾಗಲೇ ರಾಜ್ಯದ್ಯಂತೆ ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಯುತ್ತಿದೆ. ಈಗ ವಿಜಯಪುರದಲ್ಲು ಪ್ರತಿಭಟನೆ ಜೋರಾಗಿ ನಡೆಯುತ್ತಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್-ಮದರಿ ಗ್ರಾಮದ ಬಳಿ ಇರುವ ಬಾಲಾಜಿ ಶುಗರ್ಸ್​ ಗೆ ರೈತರು​ ಮುತ್ತಿಗೆ ಹಾಕಿದ್ದಾರೆ. ಚಾಲನೆಯಲ್ಲಿದ್ದ ಕಾರ್ಖಾನೆಯ ಬಂದ್​ಗೆ ರೈತರ ಒತ್ತಾಯ ಮಾಡಿದ್ದಾರೆ. ಸಹನೆ ಕಳೆದುಕೊಂಡ ರೈತರಿಂದ ಕಲ್ಲು, ಕಬ್ಬಿನ ಜಲ್ಲೆ ತೂರಾಟ ನಡೆದಿದ್ದು, ಕೇನ್ ಕ್ಯಾರಿಯರ್ ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ರೈತರು.

ಇನ್ನು ಪ್ರತಿಭಟನೆಯಲ್ಲಿ ರೈತರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ನೂರಾರು ರೈತರಿಂದ ಕಾರ್ಖಾನೆಗೆ ಮುತ್ತಿಗೆಗೆ ರೈತರು ಯತ್ನ ಮಾಡಿದ್ದಾರೆ. ಕಾರ್ಖಾನೆ ಕೇನ್ ಕ್ಯಾರಿಯರ್ ಕೊಠಡಿ ಗಾಜು ಪುಡಿ ಪುಡಿಯಾಗಿದೆ. ರೈತರಿಗೆ ತಿಳಿಹೇಳಲು ಪೊಲೀಸರು ಯತ್ನಿಸಿದ್ದಾರೆ.

RELATED ARTICLES

Related Articles

TRENDING ARTICLES