Sunday, November 24, 2024

ಮಂಡ್ಯ ಕ್ಷೇತ್ರದಲ್ಲಿ ಗರಿಗೆದರಿದ ಚುನಾವಣೆ ಅಖಾಡ

ಮಂಡ್ಯ : ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ, ವಿಜಯ್ ಆನಂದ್ ಹಾಗೂ ನಾನು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು. ಟಿಕೆಟ್‌ಗಾಗಿ ಅಂತರ ಕಾಯ್ದುಕೊಂಡಿರುವುದು ಸತ್ಯ. ಆದ್ರೆ, ಯಾವುದೇ ಭಿನ್ನಮತ ಇಲ್ಲ ಅಂತ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೆಚ್.ಎನ್.ಯೋಗೇಶ್ ಹೇಳಿದ್ದಾರೆ.

ಮಂಡ್ಯದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಎಂ.ಶ್ರೀನಿವಾಸ್ ಧರ್ಮಸ್ಥಳ 5ನೇ ಯಾತ್ರೆಗೆ ಚಾಲನೆ ನೀಡಿದರು. ಈ ಯಾತ್ರೆಯಲ್ಲಿ 20 ಬಸ್ ಹಾಗೂ ಕಾರುಗಳಲ್ಲಿ 1100 ಮಂದಿ ಯಾತ್ರೆ ಹೊರಟರು.ಈ ವೇಳೆ ಮಾತನಾಡಿದ HN ಯೋಗೇಶ್, ಕೆಲವು ಕಾರಣಗಳಿಂದ ಅದೆಷ್ಟೋ ಜನರು ಧರ್ಮಸ್ಥಳ ನೋಡಲು ಆಗಿರುವುದಿಲ್ಲ.ಅಂಥಾ ಜನರಿಗೆ ಧರ್ಮಸ್ಥಳ ಯಾತ್ರೆ ಮಾಡಿಸುವುದು ಒಂದು ಜವಾಬ್ದಾರಿ.ಹಾಗಾಗಿ ನಾನು ಈ ಯಾತ್ರೆ ಹಮ್ಮಿಕೊಂಡು ಜನರನ್ನ ಧರ್ಮಸ್ಥಳಕ್ಕೆ ಕಳುಹಿಸುತ್ತಿದ್ದೇನೆ.ಇದರ ಉದ್ದೇಶ ಬೇರೆ ಏನೂ ಇಲ್ಲ, ಜನರ ಸೇವೆಯೇ ನನ್ನ ಉದ್ದೇಶ ಎಂದ್ರು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಆರು ತಿಂಗಳ ರಾಜಕಾರಣಕ್ಕೆ ಬೆಲೆ ಇಲ್ಲ.ಈಗಾಗಲೇ ಪ್ರಚಾರ ಕೈಗೊಂಡಿರುವ ಮನ್‌ಮುಲ್ ಅಧ್ಯಕ್ಷ ರಾಮಚಂದ್ರ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದವರೇ ಅಲ್ಲ.ಅವರು ಕಾಂಪಿಟೇಟರ್ ಅಲ್ಲ ಎಂದು ಗುಡುಗಿದ ಯೋಗೇಶ್, ನಮ್ಮ ಕ್ಷೇತ್ರದಲ್ಲಿ ನಾವು ಕೆಲಸ ಮಾಡಿದ್ದೇವೆ. ಗ್ರಾಮ ಪಂಚಾಯಿತಿ, ಸೊಸೈಟಿ, ಡೇರಿ ಚುನಾವಣೆಗಳನ್ನು ಎದುರಿಸಿದ್ದೇವೆ.ತಳಮಟ್ಟದಿಂದ ಜನರ ಕಷ್ಟದ ಜೊತೆ ನಾವು ಬೆರೆತಿದ್ದೇವೆ‌. ಜನರ ಕಷ್ಟಕ್ಕೆ ಸ್ಪಂದಿಸುವವರನ್ನು ಜನರು ಆಶೀರ್ವಾದ ಮಾಡುತ್ತಾರೆ.ರಾಮಚಂದ್ರು ಎಲ್ಲಿದ್ರು.? ಏನು ಕೆಲಸ ಮಾಡಿದ್ದಾರೆ ಅಂತ ಆಕ್ರೋಶ ಹೊರ ಹಾಕಿದರು.

ಜೆಡಿಎಸ್ ಪಕ್ಷ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹೆಸರಲ್ಲಿ ನನ್ನ ಹೆಸರು ಇರುವ ಆಶಾಭಾವನೆ ಇದೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ಪಟ್ಟಿಯನ್ನು ಕೊನೆಯಲ್ಲಿ ಪ್ರಕಟ ಮಾಡ್ತಾರೆ. ನನಗೆ ಖಂಡಿತಾ ಟಿಕೆಟ್ ಸಿಗುವ ಭರವಸೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಇದೆ. ಕೆಲಸ ಮಾಡೋರಿಗೆ ಮಾತ್ರ ಪಕ್ಷ ಟಿಕೆಟ್ ನೀಡುತ್ತೆ ಅಂತೇಳಿದ್ರು. ಒಟ್ಟಾರೆ, ಚುನಾವಣೆ ಘೋಷಣೆಗೂ ಮುನ್ನ ಮಂಡ್ಯ ವಿಧಾನ ಸಭಾ ಕ್ಷೇತ್ರ ಮಾತ್ರ ರಂಗೇರಿರೋದ್ರಲ್ಲಿ ಅನುಮಾನವೇ ಇಲ್ಲ.

ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ

RELATED ARTICLES

Related Articles

TRENDING ARTICLES