Friday, March 29, 2024

ಟ್ರಾಫಿಕ್ ಎಎಸ್ಐ ಮೇಲೆ ಏರ್ಪೋರ್ಟ್​​​​​ ಇನ್ಸ್​ಪೆಕ್ಟರ್ ದರ್ಪ

ದೇವನಹಳ್ಳಿ: ಎಎಸ್ಐಗೆ ಕರೆ‌ ಮಾಡಿ ಏರ್ಪೋಟ್ ಇನ್ಸ್​ಪೆಕ್ಟರ್ ಮುತ್ತುರಾಜ್ ದರ್ಪದ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್​ಪೆಕ್ಟರ್​​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಕಳೆದ 26 ರಂದು ಹೆದ್ದಾರಿಯಲ್ಲಿ ಬರ್ತಿದ್ದ ಕಾರನ್ನ‌ ತಡೆದಿದ್ದ ಸಂಚಾರಿ ಪೊಲೀಸರು. ಈ‌ ವೇಳೆ‌‌ ಕಾರಿನ ಮೇಲೆ 41500 ರೂಪಾಯಿ ದಂಡವಿದ್ದು, ಕಟ್ಟುವಂತೆ ಸೂಚಿಸಿದ್ದ ಪೊಲೀಸರು. ಆದ್ರೆ ಈ ವೇಳೆ ದಂಡ ಕಟ್ಟದೆ ಇನ್ಸ್​ಪೆಕ್ಟರ್ ಮುತ್ತುರಾಜ್ ಗೆ ಕರೆಮಾಡಿ ಬಿಡುವಂತೆ ಕೇಳಿದ್ದ ಕಾರು ಮಾಲೀಕ. ಆದರೆ ಕಾನೂನು ಎಲ್ಲರಿಗೂ ಒಂದೆ ಅಂತ ಕಾರು ಬಿಡಲು ನಿರಾಕರಿಸಿದ್ದ ಎಎಸ್ಐ. ಕೊನೆಗೂ 2 ಸಾವಿರ ದಂಡ ಕಟ್ಟಿಸಿಕೊಂಡು ನೋಟಿಸ್ ಕೊಟ್ಟು ಕಳಿಸಿದ್ದ ಎಎಸ್ಐ. ಹೀಗಾಗಿ ವಾಹನ ಹೋದ ನಂತರ ಎಎಸ್ಐಗೆ ಕರೆ ಮಾಡಿ ಮುತ್ತುರಾಜ್ ದರ್ಪ ಮರೆದಿದ್ದಾರೆ.

ಕೆಂಪೇಗೌಡ ಏರ್ಪೋಟ್ ಲಾ ಅಂಡ್ ಆರ್ಡರ್ ಇನ್ಸ್​ಪೆಕ್ಟರ್ ಮುತ್ತುರಾಜ್ ನಿಂದ ಟ್ರಾಫಿಕ್ ಎಎಸ್ಐ ವೆಂಕಟೇಶ್ ಮೇಲೆ ದರ್ಪ‌ ತೋರಿಸಿದ್ದು, ನಾನು ಯಾರು ಅಂತ ಗೊತ್ತಿಲ್ವ ತೋರಿಸ್ತೀನಿ ಅಂತ ಎಎಸ್ಐಗೆ ದಮ್ಕಿ ಹಾಕಿದ್ದ ಎನ್ನಲಾಗಿದೆ. ಈ ಕುರಿತು ಮುತ್ತುರಾಜ್ ದರ್ಪದ ಆಡಿಯೋ ಇದೀಗ ವೈರಲ್ ಆಗಿದ್ದು, ಸಾಮಾನ್ಯರಿಗೊಂದು ನ್ಯಾಯ ಇನ್ಸ್​ಪೆಕ್ಟರ್​ಗೊಂದು ನ್ಯಾಯವಾ? ಅಂತ ನೆಟ್ಟಿಗರು ಪ್ರಶ್ನೆ ಎತ್ತುತ್ತಿದ್ದಾರೆ.

RELATED ARTICLES

Related Articles

TRENDING ARTICLES