Monday, December 23, 2024

ಶಿವಮೊಗ್ಗ ಮೇಯರ್ ಸ್ಥಾನಕ್ಕೇರಿದ ಎಸ್. ಶಿವಕುಮಾರ್..!

ಶಿವಮೊಗ್ಗ: ಶಿವಮೊಗ್ಗದಲ್ಲಿ ಇಂದು ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆದಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಎಸ್. ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಸಾಕಷ್ಟು ಕುತೂಹಲ ಮೂಡಿಸಿದ್ದ, ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಪಲಿತಾಂಶ ಹೊರಬಿದ್ದಿದೆ.

ಮೇಯರ್ ಆಗಿ ಎಸ್. ಶಿವಕುಮಾರ್ ಆಯ್ಕೆಯಾಗಿದ್ದರೆ, ಉಪಮೇಯರ್ ಆಗಿ ಲಕ್ಷ್ಮೀ ಶಂಕರ್ ನಾಯ್ಕ್ ಆಯ್ಕಯಾಗಿದ್ದಾರೆ. 35 ಸದಸ್ಯರಿಂದ ಆಯ್ಕೆಯಾದ ಪಾಲಿಕೆ ಸದಸ್ಯರಲ್ಲಿ 23 ಸದಸ್ಯರು ಬಿಜೆಪಿಯ ಶಿವಕುಮಾರ್ ಪರ ಮತ ಚಲಾವಣೆಯಾಗಿದೆ.

ಶಾಸಕರಾದ ಈಶ್ವರಪ್ಪ, ಆಯನೂರು ಮಂಜುನಾಥ್ ಮತ್ತು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಸಹ ಮತ ಚಲಾವಣೆ. ಒಟ್ಟು 26 ಮತಗಳನ್ನ ಪಡೆದ ಶಿವಕುಮಾರ್.11 ಮತ ಪಡೆದ ಕಾಂಗ್ರೆಸ್ ನ ಪ್ರತಿಸ್ಪರ್ಧಿ ಆರ್.ಸಿ. ನಾಯ್ಕ್. ಉಪಮೇಯರ್ ಆಗಿ ಲಕ್ಷ್ಮೀ ಶಂಕರ್ ನಾಯ್ಕ್ 26 ಮತಗಳನ್ನು ಪಡೆದಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದಲ್ಲಿ ಚುನಾವಣೆ ಸಂಪೂರ್ಣವಾಗಿದೆ.

RELATED ARTICLES

Related Articles

TRENDING ARTICLES