Monday, December 23, 2024

ಮಿರ ಮಿರ ಮಿಂಚಿದ ತಾರೆಯರು.. ಹಬ್ಬದ ಸಂಭ್ರಮ ಜೋರು

ರಾಕಿಂಗ್ ಕಿಡ್ಸ್ ಜೊತೆ ರಾಕಿಭಾಯ್ ಯಶ್ ದಂಪತಿ ಸೇರಿದಂತೆ ದೇಶಾದ್ಯಂತ ಸಾಕಷ್ಟು ಮಂದಿ ಸೆಲೆಬ್ರಿಟೀಸ್ ಬೆಳಕಿನ ಹಬ್ಬವನ್ನು ಸಂಭ್ರಮಿಸಿದ್ದಾರೆ. ಹೊಸ ಬಟ್ಟೆ ತೊಟ್ಟು, ಪಟಾಕಿ ಸಿಡಿಸಿ, ಸಿಹಿ ತಿಂದು ತರಹೇವಾರಿ ರೀತಿಯಲ್ಲಿ ಮಿಂಚಿದ್ದಾರೆ. ಕಮಲ್ ಹಾಸನ್​ರಿಂದ ಹಿಡಿದು, ಕಾಜೋಲ್​ವರೆಗೆ ಯಾರೆಲ್ಲಾ ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ರು ಅಂತೀರಾ..? ನೀವೇ ಓದಿ.

  • ಯಶ್ ಇನ್ಸ್​ಟಾ ಪೋಸ್ಟ್​ಗೆ 49 ನಿಮಿಷದಲ್ಲಿ ಮಿಲಿಯನ್ ಲೈಕ್ಸ್
  • ಪಟಾಕಿ ಸಿಡಿಸಿದ ಯಶ್, ಕಮಲ್, ಮಹಾನಟಿ ಕೀರ್ತಿ ಸುರೇಶ್
  • ಕಲರ್​ಫುಲ್ ಕಾಸ್ಟ್ಯೂಮ್ಸ್​ನಲ್ಲಿ ಗ್ಲಾಮರ್ ಡಾಲ್ಸ್ ಹಬ್ಬದ ರಂಗು

ರಾಕಿಂಗ್ ಸ್ಟಾರ್ ಯಶ್​ಗೆ ಬರೀ ಸಿನಿಮಾ ವಿಚಾರಕ್ಕಷ್ಟೇ ಅಲ್ಲ, ಫ್ಯಾಮಿಲಿ ವಿಚಾರದಲ್ಲೂ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕೂಡ ಖ್ಯಾತ ನಟಿಯಾಗಿದ್ದರಿಂದ ಈ ರಾಕಿಂಗ್ ದಂಪತಿ ಏನೇ ಮಾಡಿದ್ರೂ ಟ್ರೆಂಡ್. ಅದ್ರಲ್ಲೂ ಐರಾ ಹಾಗೂ ಯಥರ್ವ್ ಹುಟ್ಟಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಇವ್ರ ದರ್ಬಾರ್ ಜೋರಿದೆ.

ಯಾವುದೇ ಹಬ್ಬ ಬಂದ್ರೂ ಸಾಂಪ್ರದಾಯಿಕ ಉಡುಗೆಯಲ್ಲಿ ಇಡೀ ಕುಟುಂಬ ರಾಜ್ಯದ ಜನತೆಗೆ ಹಾಗೂ ಫ್ಯಾನ್ಸ್​ಗೆ ಶುಭಾಶಯ ಕೋರುತ್ತೆ. ಈ ಬಾರಿಯ ದೀಪಾವಳಿಗೂ ರಾಕಿಂಗ್ ಕಿಡ್ಸ್ ಜೊತೆ ಯಶ್ ದಂಪತಿ ಪಟಾಕಿ ಸಿಡಿಸಿ, ದೀಪದ ಬೆಳಕು ಹರಿಸಿ, ಶುಭ ಕೋರಿದ್ದಾರೆ. ಸದ್ಯ ಆ ಫೋಟೋಸ್ ಸಖತ್ ವೈರಲ್ ಆಗ್ತಿವೆ. ಜೊತೆಗೆ ನ್ಯಾಷನಲ್ ಸ್ಟಾರ್ ಯಶ್ ಇನ್ಸ್​ಟಾದಲ್ಲಿ ಹಾಕಿದ ಒಂದು ಸ್ಟಿಲ್ ಫೋಟೋ ಜಸ್ಟ್ 49 ನಿಮಿಷದಲ್ಲಿ ಬರೋಬ್ಬರಿ ಒಂದು ಮಿಲಿಯನ್ ಲೈಕ್ಸ್ ಪಡೆದಿದೆ.

ಇನ್ನು ವಿಕ್ರಮ್ ಚಿತ್ರದ ಬಿಗ್ಗೆಸ್ಟ್ ಸಕ್ಸಸ್​​ನಿಂದ ಸದ್ದು ಮಾಡ್ತಿರೋ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ತಮ್ಮ ಮನೆಯ ಟೆರೇಸ್ ಮೇಲೆ ಸಿಡಿಮದ್ದು ಸಿಡಿಸಿ, ವೈಟ್ ಅಂಡ್ ವೈಟ್​ನಲ್ಲಿ ಮಧುಮಗನಂತೆ ಮಿಂಚಿದ್ದಾರೆ. ಮಹಾನಟಿ ಕೀರ್ತಿ ಸುರೇಶ್ ಕೂಡ ಸುರ ಸುರ ಬತ್ತಿ ಹಿಡಿದು ಹಬ್ಬದ ರಂಗು ಹೆಚ್ಚಿಸಿದ್ದಾರೆ.

ಪುಷ್ಪ ಚಿತ್ರದಿಂದ ನ್ಯಾಷನಲ್ ಸ್ಟಾರ್ ಆಗಿ ಧೂಳೆಬ್ಬಿಸಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನ್ಯೂ ಔಟ್​ಫಿಟ್​ನಲ್ಲಿ ಹಬ್ಬದ ಶುಭಾಶಯ ಕೋರಿರೋದು ಇಂಟರೆಸ್ಟಿಂಗ್. ಇನ್ನು ಬಾಲಿವುಡ್ ನಟಿ ಕಾಜೋಲ್ ಹಾಗೂ ಕತ್ರಿನಾ ಕೈಫ್ ಕೂಡ ಲಕ್ಷಣವಾದ ಧರಿಸುಗಳಲ್ಲಿ ಕಾಣಸಿಗಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವ್ರ ದರ್ಬಾರ್ ಜೋರಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES