Monday, December 23, 2024

ಬೆಳಕಿನ ಹಬ್ಬದಲ್ಲಿ ಪಟಾಕಿ ಹಚ್ಚೋ ಮುನ್ನ ಎಚ್ಚರ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಪಟಾಕಿ ಅವಘಡಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ 3 ದಿನಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ನಗರದಲ್ಲಿ ಸ್ವಲ್ಪ ಯಾಮಾರಿದ್ರೆ ಪ್ರಾಣಕ್ಕೆ ಕುತ್ತು ತರುತ್ತೆ ಡೆಡ್ಲಿ ಪಟಾಕಿ, ಆದೇಶ ಧಿಕ್ಕರಿಸಿ ಪಟಾಕಿ ಹೊಡೆದಿದ್ದಕ್ಕೆ ಹಲವರ ಬದುಕು ಕತ್ತಲಾಗಿದ್ದು, ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮಾತ್ರ ಎಚ್ಚೆತ್ತುಕೊಳ್ಳದಂತೆ ಕಾಣುತ್ತಿಲ್ಲ.

ಇನ್ನು, ಕಳೆದ 3 ದಿನಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 17 ಪ್ರಕರಣ ದಾಖಲಾಗಿದೆ. ನಾರಾಯಣ ನೇತ್ರಾಲಯದಲ್ಲಿ18, ನೇತ್ರದಾಮ ಆಸ್ಪತ್ರೆಯಲ್ಲಿ 20 ಕೇಸ್​, ಶಂಕರ ಆಸ್ಪತ್ರೆಯಲ್ಲಿ 13, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 1 ಕೇಸ್‌ ದಾಖಲಾಗಿದೆ.

RELATED ARTICLES

Related Articles

TRENDING ARTICLES