Sunday, December 22, 2024

ರಮ್ಯಾ ಚೊಚ್ಚಲ ಕನಸೇ ಭಗ್ನ.. ಕ್ಯಾನ್ಸಲ್ ಆಯ್ತಾ ಚಿತ್ರ..?

ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಇನ್​ಚಾರ್ಜ್​ ಆಗಿದ್ದ ರಮ್ಯಾ, ಎಲ್ಲವನ್ನೂ ಬಿಟ್ಟು ಮತ್ತೆ ಸಿನಿಮಾದತ್ತ ಮುಖ ಮಾಡಿದ್ರು. ಇದೀಗ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಿಂದ ಹೊರಬಂದಿದ್ದಾರೆ. ಅರೇ ಏನಾಯ್ತು ಈಕೆಗೆ ಅಂತೀರಾ..? ನೀವೇ ಓದಿ.

ಬಣ್ಣ ಹಚ್ಚೋ ನಿರ್ಧಾರದಿಂದ ದೂರ ಸರಿದ ಮೋಹಕತಾರೆ

ನಾಗರಹಾವು ಸಿನಿಮಾ ವಿಷ್ಣುವರ್ಧನ್​ರದ್ದು ಅಂತ ಕನ್ಸಿಡರ್ ಮಾಡೋದೇ ಆದ್ರೆ ಆರ್ಯನ್ ಸಿನಿಮಾನೇ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅವ್ರ ಕಟ್ಟ ಕಡೆಯ ಸಿನಿಮಾ. 2014ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಿವಣ್ಣ ಜೊತೆ ಬಣ್ಣ ಹಚ್ಚಿದ್ರು ಮೋಹಕತಾರೆ. ಈ ಸಿನಿಮಾ ಕಮರ್ಷಿಯಲ್ ಸಕ್ಸಸ್ ಆಗಿಲ್ಲವಾದ್ರೂ, ರಮ್ಯಾ ಡಿಮ್ಯಾಂಡ್ ಮಾತ್ರ ಇಂದಿಗೂ ಕಮ್ಮಿ ಆಗಿಲ್ಲ.

ರಾಜಕಾರಣದತ್ತ ಮುಖ ಮಾಡಿದ ರಮ್ಯಾ, ಮಂಡ್ಯ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ರು. ಅದಾದ ಬಳಿಕ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ವಿಂಗ್ ಇನ್​ಚಾರ್ಜ್​ ಆಗಿಯೂ ಕಾರ್ಯ ನಿರ್ವಹಿಸಿದ್ರು. ನಂತ್ರ ರಾಜಕಾರಣದ ಸಹವಾಸವೇ ಬೇಡ ಅಂತ ಸಿನಿಮಾ ಕಡೆ ಮುಖ ಮಾಡಿದ ರಮ್ಯಾ, ಌಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ ತೆರೆದರು.

ವಿಜಯದಶಮಿ ದಿನ ರಾಜ್ ಬಿ ಶೆಟ್ಟಿ ಜೊತೆ ಸ್ವಾತಿ ಮುತ್ತಿನ ಮಳೆ ಹನಿಯೇ ಅನ್ನೋ ಸಿನಿಮಾ ಮಾಡೋದಾಗಿ ಅನೌನ್ಸ್ ಕೂಡ ಮಾಡಿದ್ರು. ಆದ್ರೀಗ ಅದ್ರಿಂದ ಹೊರಬಂದಿದ್ದಾರೆ. ಬಣ್ಣ ಹಚ್ಚೋ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ಹೌದು. ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಲಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಸಿರಿ ಆಯ್ಕೆ ಆಗಿದ್ದಾರೆ.

ಇನ್ನು ರೀಸೆಂಟ್ ಆಗಿ ಭಾರತ್ ಜೋಡೊ ಪಾದಯಾತ್ರೆಗೆ ರಾಹುಲ್ ಗಾಂಧಿ ಜೊತೆ ಕೈ ಜೋಡಿಸಿರೋ ರಮ್ಯಾ, ಒಂದಷ್ಟು ಗುಮಾನಿಗಳಿಗೆ ಕಾರಣವಾಗಿದ್ದಾರೆ. ಮತ್ತೆ ರಾಜಕಾರಣದತ್ತ ವಾಲುತ್ತಾರಾ ಅನ್ನೋ ಅನುಮಾನ ಎಲ್ರಲ್ಲೂ ಕಾಡ್ತಿದೆ. ಒಂದು ವೇಳೆ ರಾಜಕಾರಣದತ್ತ ಮತ್ತೆ ಮುಖ ಮಾಡಿದ್ರೆ, ಬಣ್ಣ ಹಚ್ಚೋದು ಡೌಟು. ಇಲ್ಲವಾದಲ್ಲಿ ಈ ಸಿನಿಮಾ ನಿರ್ಮಾಣದ ಜೊತೆಗೆ ಸದ್ಯದಲ್ಲೇ ತಮ್ಮ ನಟನಾ ನಿರ್ಧಾರ ಖಚಿತಪಡಿಸಲಿದ್ದಾರೆ ಸ್ಯಾಂಡಲ್​ವುಡ್ ಪದ್ಮಾವತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES