Saturday, January 11, 2025

ಹೊಸ ದಾಖಲೆ ಬರೆದ ‘ಕಾಂತಾರ’; ಎಲ್ಲಾ ಸಿನಿಮಾಗಳ ರೆಕಾರ್ಡ್​​ ಧೂಳೀಪಟ

ಬೆಂಗಳೂರು: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ದೇಶದ್ಯಂತ ತನ್ನ ಓಟ ಮುಂದುವರೆಸಿದ್ದು, ಅದರಂತೆ ರಾಜ್ಯದಲ್ಲಿ 77 ಲಕ್ಷ ಬೆಳ್ಳಿ ಪರದೆಯ ಮೇಲೆ ವೀಕ್ಷಣೆ ಮಾಡಿದ್ದಾರೆ.

ದೇಶ, ವಿದೇಶಗಳಲ್ಲಿ ಕಾಂತಾರ ಚಿತ್ರ ನೋಡಿದ ಸಿನಿಮಾ ಅಭಿಮಾನಿಗಳು ಅಕ್ಷರಶಃ ಫಿದಾ ಆಗಿದ್ದಾರೆ. ಅದರಂತೆ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್‌ ಅಂತೂ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ನಾನಾ ರಾಜಕಾರಣಿಗಳು, ನಟರು ಸಿನಿಮಾ ಕಥೆ ಹಾಗೂ ನಟನೆಗೆ ಪ್ರಶಂಸೆಯ ಸುರಿ ಮಳೆಗೈದಿದ್ದಾರೆ.

ಹೀಗಾಗಲೇ ಬಾಕ್ಸ್​​ ಆಫೀಸ್​ ಸೇರಿದಂತೆ ಬಿಡುಗಡೆಯಾದ ನಾಲ್ಕು ಭಾಷೆಯಲ್ಲಿ ಕಲೆಕ್ಷನ್​ನಲ್ಲಿ ಧೂಳು ಎಬ್ಬಿಸುತ್ತಿರುವ ಕಾಂತಾರ ಸಿನಿಮಾ ರಾಜ್ಯದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ದಾಖಲೆ ಬರೆದಿದೆ.

ಪಿಆರ್​​ಓ ಪ್ರಕಾರ, 2017ರಲ್ಲಿ  ನಟ ಪುನೀತ್​ ರಾಜ್​ಕುಮಾರ್​ ನಟನೆಯ ‘ರಾಜಕುಮಾರ’ 65 ಲಕ್ಷ ಪರದೆಯ ಮೇಲೆ ವೀಕ್ಷಣೆ ಕಂಡರೆ, 2018 ರಲ್ಲಿ ನಟ ಯಶ್​ ನಟನೆಯ ಕೆಜೆಎಫ್​ 75 ಲಕ್ಷ, 2022 ರಲ್ಲಿ ಕೆಜಿಎಫ್​ 2, 72 ಲಕ್ಷ, ಬಿಡುಗಡೆಯಾದ 25 ದಿನಗಳಲ್ಲಿ ರಿಷಭ್​ ಶೆಟ್ಟಿ ನಟನೆಯ ಕಾಂತಾರ 77 ಲಕ್ಷ ವೀಕ್ಷಣೆ ಕಂಡು, 1 ಕೋಟಿ ದಾಟುವ ನಿರೀಕ್ಷೆಯಲ್ಲಿದೆ.

ಇನ್ನು ಬಾಲಿವುಡ್ ನಟ-ನಟಿಯರು ಸಹ ಈ ಸಿನಿಮಾದ ಕಥೆಗೆ ಫಿದಾ ಆಗಿ ಟ್ವೀಟ್​ ಇನ್ನೀತರ ರೀತಿಯಲ್ಲಿ ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸಿದ್ದರು.

RELATED ARTICLES

Related Articles

TRENDING ARTICLES