Wednesday, January 22, 2025

‘ಗಂಧದ ಗುಡಿ’ ಪ್ರೀಮಿಯರ್ ಶೋ ಬುಕ್ಕಿಂಗ್ಸ್ ಇಂದಿನಿಂದ ಆರಂಭ

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ನಟಿಸಿದ ಕೊನೆಯ ಸಿನಿಮಾ ‘ಗಂಧದ ಗುಡಿ’ಯ ಪ್ರೀಮಿಯರ್ ಶೋ ಬುಕ್ಕಿಂಗ್ಸ್ ಇಂದಿನಿಂದ ಆರಂಭವಾಗಿದೆ.

ಇತ್ತೀಚಿಗೆ ಗಂಧದ ಗುಡಿ ಸಿನಿಮಾ ಪ್ರೀ ರಿಲೀಸ್​ ಇವೆಂಟ್​ ಅದ್ಧೂರಿಯಾಗಿ ಬೆಂಗಳೂರಿನ ಅರಮನೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಇದ್ರಲ್ಲಿ ಹಲವು ಭಾಷೆಯ ದಿಗ್ಗಜ ನಟ-ನಟಿಯರು ಭಾಗಿಯಾಗಿ ಪುನೀತ್​​ರನ್ನ ಸ್ಮರಿಸಿಕೊಂಡಿದ್ದರು.

ಗಂಧದ ಗುಡಿ ಬರುವ ಅಕ್ಟೋಬರ್​ 28 ರಂದು ಬೆಳ್ಳಿ ಪರದೆಯ ಮೇಲೆ ತೆರೆಗೆ ಅಪ್ಪಳಿಸಲಿದೆ. ಹೀಗಾಗಿ ಚಿತ್ರದ ಪ್ರೀಮಿಯರ್​ ಶೋ ಬುಕ್ಕಿಂಗ್ಸ್​ನ್ನ ಚಿತ್ರತಂಡ ಇಂದಿನಿಂದ ಅಭಿಮಾನಿಗಳಿಗಾಗಿ ಆರಂಭಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿದ​ ಗಂಧದ ಗುಡಿ ಸಿನಿಮಾ ನಿರ್ಮಾಣ ಸಂಸ್ಥೆಯ ಪಿಆರ್​​ಕೆ ಸ್ಟೂಡಿಯೋ, ಕರ್ನಾಟಕವನ್ನು ನಮ್ಮೆಲ್ಲರ ಅಪ್ಪು ಅವರ ಕಣ್ಣುಗಳ ಮೂಲಕ ನೋಡುವ ಸೌಭಾಗ್ಯ. ಗಂಧದಗುಡಿಯ ಪ್ರೀಮಿಯರ್ ಶೋಗಾಗಿ ಇಂದಿನಿಂದ 7;10 ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬುಕ್ ಮಾಡಿಕೊಳ್ಳಿ ಎಂದು ತಿಳಿಸಿದೆ.

ಪ್ರೀಮಿಯರ್ ಶೋ ಬುಕ್ಕಿಂಗ್ ಅಕ್ಟೋಬರ್ 24ರಂದು(ಇಂದು) ಸಂಜೆ 7.10ಕ್ಕೆ ಗಂಟೆಗೆ ಆರಂಭವಾಗುತ್ತಿದ್ದು ಅಭಿಮಾನಿಗಳು ಈಗಲೇ ಟಿಕೆಟ್ ಬುಕ್ ಮಾಡಬಹುದು ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

RELATED ARTICLES

Related Articles

TRENDING ARTICLES