Thursday, April 25, 2024

ನಾಳೆ ಪಾಕಿಸ್ತಾನ-ಭಾರತ ನಡುವೆ ಹೈವೋಲ್ಟೆಜ್​ T-20 ಪಂದ್ಯ

ಆಸ್ಟ್ರೇಲಿಯಾ; ಸಾಂಪ್ರದಾಯಿಕ ಎದುರಾಗಳಿ, ಬದ್ಧ ವೈರಿ ಪಾಕಿಸ್ತಾನ ತಂಡದ ವಿರುದ್ಧ ಐಸಿಸಿ ವಿಶ್ವಕಪ್​ನ ಗ್ರೂಪ್​ ‘ಬಿ’ಯ ಮೊದಲ ಟಿ-20 ಪಂದ್ಯ ಟೀಂ ಇಂಡಿಯಾ ನಾಳೆ ಆಡಲಿದ್ದು, ಎಲ್ಲಾ ಕ್ರಿಕೆಟ್​ ಅಭಿಮಾನಿಗಳು ಈ ಪಂದ್ಯದ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನಾಳೆ (ಭಾನುವಾರ) ಐಸಿಸಿ ಟಿ-20 ವಿಶ್ವಕಪ್ ಪರಸ್ಪರ ಸೆಣಸಾಟ ನಡೆಸಲಿವೆ. ಈ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 1,30 ಕ್ಕೆ ಈ ಪಂದ್ಯ ಆರಂಭವಾಗಲಿದೆ. ಇನ್ನು ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿವೆ.

ಪಾಕಿಸ್ತಾನ ಹಾಗೂ ಭಾರತ ಈ ವರ್ಷದ ಏಷ್ಯಾ ಕಪ್​ನಲ್ಲಿ ಪರಸ್ಪರ ಪಂದ್ಯ ಆಡಿದ್ದವು. ಇದರಲ್ಲಿ ಒಂದು ಪಂದ್ಯ ಭಾರತ ಗೆಲುವು ಸಾಧಿಸಿದರೆ, ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿನ ನಗೆ ಬೀರಿತ್ತು. ಈಗ ಮತ್ತೆ ಎರಡು ತಂಡಗಳ ನಡುವೆ ಪಂದ್ಯ ನಾಳೆ ನಡೆಯಲಿದ್ದು, ಈ ಪಂದ್ಯದ ಮೇಲೆ ವಿಶ್ವದ ನಾನಾ ಕಣ್ಣುಗಳು ಬಿದ್ದಿವೆ.

ಭಾರತ ತಂಡವನ್ನ ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಪಾಕಿಸ್ತಾನ ತಂಡವನ್ನ ಬಾಬರ್ ಅಜಮ್ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಗ್ರೂಪ್​ ಬಿ ತಂಡದಲ್ಲಿ ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ, ನೆದಲ್ಯಾಂಡ್ಸ್​, ಸೌತ್​ ಆಫ್ರೀಕಾ, ಜಿಂಬಾಬ್ವೆ ತಂಡ ಇವೆ.

ಇನ್ನು ಗ್ರೂಪ್​ ಎ ತಂಡಗಳಲ್ಲಿ ನ್ಯೂಜಿಲ್ಯಾಂಡ್​, ಇಂಗ್ಲೆಂಡ್​, ಆಸ್ಟ್ರೇಲಿಯಾ, ಶ್ರೀಲಂಕಾ, ಅಪ್ಘಾನಿಸ್ತಾನ, ಐರ್ಲೇಂಡ್​ ಇವೆ.

RELATED ARTICLES

Related Articles

TRENDING ARTICLES