Friday, January 10, 2025

ಮೇಕಿಂಗ್ ಹಂತದಲ್ಲೇ ಉಪ್ಪಿ ‘U& I’ಗೆ ಬಾಯ್​ಕಾಟ್ ಬಿಸಿ

ಬೆಂಗಳೂರು: ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿಯ ಮಹಾಸಮುದ್ರವಾಗಿ ಬದಲಾಗ್ತಿದೆ ಉಪೇಂದ್ರ ಅವ್ರ ಯು & ಐ ಸಿನಿಮಾ. ಮೇಕಿಂಗ್ ಹಂತದಲ್ಲೇ ಟಾಕ್ ಆಫ್ ದಿ ಟೌನ್ ಆಗಿರೋ ಮಹಾ ಮಾಂತ್ರಿಕನ ಈ ಚಿತ್ರದ ಫೂಟೇಜ್ ಲೀಕ್ ಆಗಿದೆ. ಅಷ್ಟೇ ಅಲ್ಲ ರಿಲೀಸ್​ಗೂ ಮೊದ್ಲೇ ಬಾಯ್​ಕಾಟ್ ಬಿಸಿ ತಟ್ಟಿದೆ.

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಅದನ್ನ ಒಪ್ಪಿಕೊಂಡೋರು ದಡ್ಡರಲ್ಲ ಅನ್ನೋದು ಸಾಕಷ್ಟು ಸಲ ಪ್ರೂವ್ ಆಗಿದೆ. ನಟನೆ, ನಿರ್ದೇಶನ, ವಿಚಾರಗಳಿಂದ ಅದನ್ನ ಸೂಪರ್ ಸ್ಟಾರ್ ಉಪ್ಪಿ ರಿಯಲ್ ಆಗಿ ಮನದಟ್ಟು ಮಾಡಿಸಿದ್ದಾರೆ. ಇದೀಗ ಒಂದು ದೊಡ್ಡ ಗ್ಯಾಪ್​ನ ಬಳಿಕ ಮತ್ತೆ ಸಾಬೀತು ಮಾಡೋಕೆ ಬರ್ತಿದ್ದಾರೆ. ಅದೇ ಯು & ಐ ಚಿತ್ರದ ಕಂಟೆಂಟ್, ಮೇಕಿಂಗ್ ಮತ್ತು ಉಪ್ಪಿಯ ಐಡಿಯಾಸ್.

ಟೈಟಲ್​ನಿಂದಲೇ ಗಮನ ಸೆಳೆದ ಯುಐ ಮೂವಿ, ಟೈಟಲ್​ನಂತೆ ಮೇಕಿಂಗ್​ನಲ್ಲೂ ವಿಭಿನ್ನತೆ ಕಾಯ್ದುಕೊಳ್ಳುತ್ತಿದೆ. ಮುಹೂರ್ತ ದಿನ ಉಪೇಂದ್ರ ಅಂಡ್ ಟೀಂ ಎರಡು ವೈಟು ಒಂದು ರೆಡ್ ನಾಮ ಹಾಕಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಪರಿ ನಿಜಕ್ಕೂ ಕ್ರಿಯೇಟೀವ್ ಅಂಡ್ ಅಮೇಜಿಂಗ್.

ಕಬ್ಜ ಶೂಟಿಂಗ್ ಮುಗಿಸಿ, ಯುಐ ಚಿತ್ರದಲ್ಲಿ ಕಂಪ್ಲೀಟ್ ಆಗಿ ತೊಡಗಿಸಿಕೊಂಡಿರೋ ಉಪೇಂದ್ರ ಅವ್ರು, ಕೆಪಿ ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ನಿರ್ಮಾಣದಲ್ಲಿ ಅದ್ಧೂರಿಯಾಗಿ ಕಟ್ಟಿಕೊಡೋ ಪ್ರಯತ್ನ ಮಾಡ್ತಿದ್ದಾರೆ. ಅದ್ರ ಒಂದೊಂದು ಸ್ಟಿಲ್ ಫೋಟೋಸ್, ಮೇಕಿಂಗ್ ವಿಡಿಯೋಸ್ ನಿಜಕ್ಕೂ ಮೈಂಡ್ ಬ್ಲೋಯಿಂಗ್.

ಅದ್ರಲ್ಲೂ ಮೇಕಿಂಗ್ ಹಂತದಲ್ಲೇ ಸಿನಿಮಾಗೆ ಬಾಯ್​ಕಾಟ್ ಬಿಸಿ ಶುರುವಾಗಿದೆ. ತಿಮ್ಮಪ್ಪನ ಭಕ್ತರಿಂದ ಟೈಟಲ್ ವಿವಾದ ಸೃಷ್ಟಿಸಲಿದೆ ಅಂತ ಎಲ್ರೂ ಅಂದುಕೊಂಡಿದ್ವಿ. ಆದ್ರೆ ಸಿನಿಮಾ ರಿಲೀಸ್​ಗೂ ಮೊದ್ಲೇ ಥಿಯೇಟರ್ ಮುಂದೆ ಸಿನಿಮಾಗೆ ಬಹಿಷ್ಕಾರ ಹಾಕ್ತಿದ್ದಾರೆ ಜನ. ಇದು ಸಿನಿಮಾದಲ್ಲಿ ಬರೋ ಸಿನಿಮಾ ಕಥೆಯೇ ಆದ್ರೂ ಲಾಜಿಕ್ ಇಲ್ಲದೆ ಉಪೇಂದ್ರ ಅವ್ರು ಏನೂ ಮಾಡಲ್ಲ. ಹಾಗಾಗಿ ಲಾಜಿಕ್ಸ್ ಜೊತೆ ಮ್ಯಾಜಿಕ್ ಮಾಡೋದು ಪಕ್ಕಾ ಆಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಬರೋಬ್ಬರಿ 50 ಕ್ಯಾಮೆರಾಗಳ ಮಧ್ಯೆ ಉಪ್ಪಿ ಅಪರಾವತಾರ ತಾಳಿದ್ದಾರೆ. ಹೌದು ಜನರ ಗುಂಪಲ್ಲಿ ಉಪ್ಪಿ ನಿಂತಂತೆ ಕ್ಯಾಮೆರಾ ಸಂತೆಯಲ್ಲಿ ಉಪ್ಪಿ ನಿಂತಿರೋ ಸ್ಟಿಲ್ ಫೋಟೋಸ್ ಲೀಕೇಜ್ ಆಗಿದ್ದು, ಏನನ್ನ ಹೇಳಲು ಹೊರಟಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಈ ಮೇಕಿಂಗ್ ಫೋಟೋಸ್ ಹುಟ್ಟಿಸಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES