Monday, December 23, 2024

22 ಕೋಟಿ ಬ್ಯುಸಿನೆಸ್ ಡೀಲ್ ಕುದುರಿಸಿದ ಡಾನ್ ಡಾಲಿ

ತೆರೆಮೇಲೆ ಲಾಂಗ್ ಹಿಡಿದು ರಕ್ತ ಹರಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ ಡಾನ್ ಜಯರಾಜ್ ಅಂಡ್ ಗ್ಯಾಂಗ್. ಯೆಸ್.. ಹೆಡ್​ಬುಷ್ ಈ ವಾರದ ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ ಆಗಿದ್ದು, 22 ಕೋಟಿ ಬ್ಯುಸಿನೆಸ್ ಡೀಲ್ ಕುದುರಿಸೋದ್ರಲ್ಲಿ ಸಕ್ಸಸ್ ಆಗಿದೆ. ಅಷ್ಟೇ ಅಲ್ಲ ದೀಪಾವಳಿಗೆ ಹೆಡ್​ಬುಷ್ ಪಟಾಕಿಗಳು ಕೂಡ ಮುಂಗಟ್ಟುಗಳಿಗೆ ಲಗ್ಗೆ ಇಟ್ಟಿವೆ. ಈ ಕುರಿತ ಲೇಟೆಸ್ಟ್ ಅಪ್ಡೇಟ್ಸ್ ನಿಮಗಾಗಿ.

  • ಪ್ಯಾನ್ ಇಂಡಿಯಾ ಕ್ರೇಜ್.. ಟಿಕೆಟ್ ಬುಕಿಂಗ್ ಶುರು..!
  • ದುಬೈನಲ್ಲಿ ಹಬೀಬಿ ಬೆಲ್ಲಿ ಡ್ಯಾನ್ಸ್.. ಮರಳುಗಾಡು ರೌಂಡ್ಸ್
  • ಡಾಲಿ ಬಾಂಬ್, ಜಯರಾಜ್ ರಾಕೆಟ್, ಕೊತ್ವಾಲ್ ಭೂಚಕ್ರ

ಹತ್ತು ಹಲವು ವಿಶೇಷತೆಗಳಿಂದ ಟಾಕ್ ಆಫ್ ದಿ ಟೌನ್ ಆಗಿರೋ ಹೆಡ್​ಬುಷ್, ಇದೇ ಶುಕ್ರವಾರ ವರ್ಲ್ಡ್​ವೈಡ್ ತೆರೆಗಪ್ಪಳಿಸುತ್ತಿದೆ. ಡಾಲಿ ಧನಂಜಯ ಡಾನ್ ಜಯರಾಜ್ ಆಗಿ ಅಬ್ಬರಿಸಿ, ಆರ್ಭಟಿಸಲಿದ್ದು, ಲಾಂಗ್ ಹಿಡಿದು ರಕ್ತ ಹರಿಸಲಿದ್ದಾರೆ. ಭೂಗತಲೋಕದ ರೆಟ್ರೋ ಕಥಾನಕ ಇದಾಗಿದ್ದು, ನೋಡುಗರಿಗೆ ಆರ್ಟಿಸ್ಟ್ ಪರ್ಫಾಮೆನ್ಸ್ ಕ್ಯೂರಿಯಾಸಿಟಿ ಜೊತೆ ಕ್ರೈಂ ಕಹಾನಿಯ ಇನ್​ಸೈಡ್ ಮ್ಯಾಟರ್ ತಿಳಿದುಕೊಳ್ಳೋ ಕೌತುಕ.

ಶೂನ್ಯ ನಿರ್ದೇಶನದ ಹಾಗೂ ಡಾಲಿ ಪಿಕ್ಚರ್ಸ್​ ಬ್ಯಾನರ್​ನಡಿ ಡಾಲಿಯೇ ನಿರ್ಮಿಸಿರೋ ಈ ಸಿನಿಮಾ, ರಿಲೀಸ್​ಗೂ ಮೊದ್ಲೇ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿದೆ. ಹೌದು.. ಭರ್ಜರಿ ಪ್ರಮೋಷನ್ಸ್​ನಿಂದ ದೇಶ, ವಿದೇಶಗಳಲ್ಲಿ ಡಾನ್ ಜಯರಾಜ್ ಟೀಂ ಅಬ್ಬರ ಸಖತ್ ಜೋರಿದೆ. ಅದ್ರಲ್ಲೂ ಝೀ ನೆಟ್ವರ್ಕ್​ಗೆ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ.

ಬರೋಬ್ಬರಿ 22 ಕೋಟಿಗೆ ಡಿಜಿಟಲ್ ಮತ್ತು ಟಿವಿ ಹಕ್ಕುಗಳು ಮಾರಾಟವಾಗಿದ್ದು, ಇದು ಚಿತ್ರತಂಡದ ಹಾಗೂ ಡಾಲಿಯ ಸಿನಿಮೋತ್ಸಾಹವನ್ನು ದುಪ್ಪಟ್ಟು ಮಾಡಿದೆ. ರಿಲೀಸ್​ಗೂ ಮೊದ್ಲೇ ಬೊಂಬಾಟ್ ಬ್ಯುಸಿನೆಸ್ ಮಾಡಿರೋ ಡಾನ್ ಜಯರಾಜ್, ಒಳ್ಳೆಯ ಬೆಲೆಗೆ ಡೀಲ್ ಕುದುರಿಸಿದ್ದಾರೆ ಅಂತ ಸುದ್ದಿಯಲ್ಲಿದ್ದಾರೆ.

ಹೆಡ್​ಬುಷ್ ಟ್ರೈಲರ್ ನೋಡಿ ಇಡೀ ಇಂಡಿಯಾ ಫಿದಾ ಆಗಿದೆ. ಹೌದು.. ಡಾಲಿ ಬರೀ ಕನ್ನಡ ಅಥ್ವಾ ಸೌತ್ ಸ್ಟಾರ್ ಅಲ್ಲ. ಪುಷ್ಪದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದವ್ರು. ಹಾಗಾಗಿ ಅವ್ರ ಈ ಸಿನಿಮಾ ದೊಡ್ಡ ಕ್ರೇಜ್ ಹುಟ್ಟಿಸಿದೆ. ಬಾಲಿವುಡ್, ಟಾಲಿವುಡ್ & ಕಾಲಿವುಡ್ ವಿಮರ್ಶಕರಿಂದ ಶಹಬಾಸ್ ಪಡೆಯುತ್ತಿದೆ. ಮುಂಬೈ ಮತ್ತು ದೆಹಲಿಯಲ್ಲಿ ಜಯರಾಜ್ ಜಪ ಶುರುವಾಗಿದ್ದು, ಟ್ರೈಲರ್ ನೋಡಿ ಪರಭಾಷಾ ವಿಮರ್ಶಕರು ಉತ್ತಮ ಪ್ರಶಂಸೆಗಳನ್ನ ವ್ಯಕ್ತಪಡಿಸ್ತಿದ್ದಾರೆ.

ಎರಡು ದಿನಕ್ಕೂ ಮೊದ್ಲೇ ಭರ್ಜರಿ‌ ಟಿಕೆಟ್ ಬುಕಿಂಗ್ ಶುರುವಾಗಿದ್ದು, ನಟರಾಕ್ಷಸ ಡಾಲಿಗೆ ಈ ಸಿನಿಮಾದಿಂದ ಮತ್ತಷ್ಟು ನೇಮು ಫೇಮು ಬರೋದು ಪಕ್ಕಾ ಆಗಿದೆ. ಕಾರಣ ಅವ್ರ ನಟನೆಗೆ ಹಾಗೂ ಸಿನಿಮಾ ಕಂಟೆಂಟ್ ಗಟ್ಟಿತನದಿಂದ ಕೂಡಿರಲಿದೆ. ಹಾಗಾಗಿ ಟಿಕೆಟ್ ಬುಕಿಂಗ್ ಭರದಿಂದ ಆಗ್ತಿದ್ದು, ಫಾಸ್ಟ್ ಆಗಿ ಸೀಟ್ಸ್ ಫಿಲ್ ಆಗ್ತಿವೆ. ವಿದೇಶಗಳಲ್ಲೂ ಆನ್​ಲೈನ್ ಟಿಕೆಟ್ ಮಾರಾಟ ಶುರುವಾಗಿರೋದು ವಿಶೇಷ.

ದುಬೈನಲ್ಲಿ‌‌ ಹಬೀಬಿ ಬೆಲ್ಲಿ ಡ್ಯಾನ್ಸ್ ಮಸ್ತ್ ಮ್ಯಾಜಿಕ್ ಮಾಡ್ತಿದೆ. ಕೆಜಿಎಫ್ ರಾಕಿಭಾಯ್ ರೀತಿ ಬೆಲ್ ಬಾಟಂ ಸ್ಟೈಲ್​ನಲ್ಲಿ

ಜಯರಾಜ್ ಅಂಡ್ ಗ್ಯಾಂಗ್, ದುಬೈನ ಮರಳುಗಾಡಲ್ಲಿ ರೌಂಡ್ಸ್ ಹೊಡೆದಿದ್ದಾರೆ. ಅದನ್ನ ನಟ ನೀನಾಸಂ ಸತೀಶ್ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿರೋದು ಇಂಟರೆಸ್ಟಿಂಗ್ ಅನಿಸಿದೆ. ಇಲ್ಲಿ ಡಾಲಿಗೆ ಯೋಗಿ, ವಸಿಷ್ಟ, ರಘು ಮುಖರ್ಜಿ, ರೋಷನ್ ಬಚ್ಚನ್ ಸೇರಿದಂತೆ ಸಾಕಷ್ಟು ಕಲಾವಿದರು ಸಾಥ್ ನೀಡಿದ್ದಾರೆ.

ದೀಪಾವಳಿಗೆ ಪಟಾಕಿ‌ ಭರಾಟೆ ಜೋರಿರಲಿದ್ದು, ಹೆಡ್​ಬುಷ್ ಟೀಂ ಹೆಸ್ರಲ್ಲಿ ತರಹೇವಾರಿ ಪಟಾಕಿಗಳು ಮಳಿಗೆಗಳಿಗೆ ಲಗ್ಗೆ ಇಟ್ಟಿವೆ. ಡಾಲಿ ಬಾಂಬ್. ಜಯರಾಜ್ ರಾಕೆಟ್. ಹಬೀಬಿ ಫ್ಲವರ್ ಪಾಟ್.. ಗಂಗಾ ಮರ್ಚಿ ಪಟಾಕಿ. ಕೊತ್ವಾಲ್ ಭೂಚಕ್ರ, ಹೀಗೆ ಪಾತ್ರಕ್ಕೊಂದು ಪಟಾಕಿಯ ಹೆಸರಿಡಲಾಗಿದೆ. ಒಟ್ಟಾರೆ ಮಾರ್ಕೆಟ್​ನಲ್ಲಿ ಡಾನ್ ಜಯರಾಜ್ ಟೀಂ ಅಬ್ಬರ ನಿರೀಕ್ಷೆಗೂ ಮೀರಿದ ಮಟ್ಟಕ್ಕಿದೆ. ತೆರೆ ಮೇಲೂ ಅದೇ ಆರ್ಭಟ ಮುಂದುವರೆಯಲಿದೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಸಿನಿರಸಿಕರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES