Monday, December 23, 2024

ಸಿಕ್ಸ್​ ಹೋಗುತ್ತಿದ್ದ ಬೌಲ್​, ಅದ್ಬುತ್​ ಕ್ಯಾಚ್​ ಹಿಡಿದ ವಿರಾಟ್​ ಕೊಹ್ಲಿ.!

ಆಸ್ಟ್ರೇಲಿಯಾ: ಇಂದು ಟೀಮ್ ಇಂಡಿಯಾ ಹಾಗೂ ಆಸ್ಟೇಲಿಯಾ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 19 ರನ್‌ಗಳಿಗೆ ಔಟಾದರು. ಆದರೆ, ಕೊಹ್ಲಿ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಆಟಕ್ಕೆ ಹೊಸ ತಿರುವು ನೀಡಿದರು.

ಆಸ್ಟೇಲಿಯಾದ ಟಿ-20 ವಿಶ್ವಕಪ್ ಅಭ್ಯಾಸ ಪಂದ್ಯದ 18 ನೇ ಓವರ್‌ನಲ್ಲಿ ಟಿಮ್ ಡೇವಿಡ್ ಅವರನ್ನ ವಿರಾಟ್​​ ರನ್ ಔಟ್ ಮಾಡಿದರು. ಅದರಂತೆ ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾಕ್ಕೆ 11 ರನ್‌ಗಳ ಅಗತ್ಯವಿದ್ದಾಗ, ವಿರಾಟ್ ಕೊಹ್ಲಿ ಲಾಂಗ್-ಆನ್‌ನಲ್ಲಿ ಮತ್ತೊಂದು ಅದ್ಭುತವಾಗಿ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಪ್ಯಾಟ್ ಕಮ್ಮಿನ್ಸ್ ಅವರು ಹೊಡೆದ ಎಸೆತವನ್ನ ಕೊಹ್ಲಿ ಒಂದೇ ಕೈಯಿಂದ ಅದ್ಭುತವಾಗಿ ಕ್ಯಾಚ್​ ಹಿಡಿದರು.

ಆಸ್ಟ್ರೇಲಿಯಾ ವಿರುದ್ಧ ಕೊನೆಯ ಓವರ್​ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್​ ಮಾಡುತ್ತಿದ್ದರು. ಈ ವೇಳೆ ಬ್ಯಾಟ್ ಬೀಸಿದ ಪ್ಯಾಟ್ ಕಮ್ಮಿನ್ಸ್ ಶಕ್ತಿಯುತವಾಗಿ ಹೊಡೆದರು. ಈ ವೇಳೆ ಲಾಂಗ್ ಆನ್‌ನಲ್ಲಿದ್ದ ಕೊಹ್ಲಿ ಸಾಮಾರ್ಥ್ಯ ಮೀರಿ ಜಿಗಿದು ಅದ್ಭುತ ಕ್ಯಾಚ್​ ಹಿಡಿದರು.

ಭಾರತ ಮೊದಲು ಬ್ಯಾಟ್​ ಮಾಡಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 186 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಆಸ್ಟೇಲಿಯಾ ತಂಡ 180 ರನ್​ ಗಳಿಸುವಲ್ಲಿ ಸಶಕ್ತವಾಯಿತು. ಈ ಮೂಲಕ ಭಾರತ 6 ರನ್​ ಅಂತರಗಳಿಂದ ಗೆಲುವು ಸಾಧಿಸಿತು.

RELATED ARTICLES

Related Articles

TRENDING ARTICLES