Wednesday, January 22, 2025

‘ಮನೆ ಮನೆಗೆ ನಾಡಧ್ವಜ’ ಅಭಿಯಾನ ಹಮ್ಮಿಕೊಂಡಿರುವ ಜೆಡಿಎಸ್

ಬೆಂಗಳೂರು : ಬಿಜೆಪಿಯ ಹರ್ ಘರ್ ತಿರಂಗಾ ಮಾದರಿಯಲ್ಲಿ ಜೆಡಿಎಸ್ ಅಭಿಯಾನ ಆರಂಭಿಸಿದ್ದು, ಮಾಜಿ ಸಿಎಂ ಹೆಚ್​ಡಿಕೆ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿ ಹಲವರು ಭಾಗಿಯಾಗಿದ್ದ್ದಾರೆ.

ನಗರದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದು, ಪ್ರಾದೇಶಿಕ ಶಕ್ತಿ ಒಗ್ಗೂಡಿಸಲು ಹೆಚ್​ಡಿಕೆ ಮಾಸ್ಟರ್ ಪ್ಲ್ಯಾನ್​ ಮಾಡಿದ್ದಾರೆ. ನವೆಂಬರ್ 1ರಿಂದ ‘ಮನೆ ಮನೆಗೆ ಕನ್ನಡ ಬಾವುಟ’ ಅಭಿಯಾನ ಆರಂಭಿಸಿದ್ದು, ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕನ್ನಡ ಬಾವುಟ ಹಾರಿಸಲು ಸಿದ್ಧತೆ ನಡೆಸಿದ್ದಾರೆ.

ಇನ್ನು, ಮನೆ ಮನೆಗೆ ಕನ್ನಡ ಬಾವುಟ ನೀಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ರಾಷ್ಟ್ರ ಪ್ರೇಮದ ಜೊತೆಗೆ ರಾಜ್ಯ ಪ್ರೀತಿ ಸಂದೇಶ ರವಾನೆಗೆ ಪ್ಲ್ಯಾನ್​ ಮಾಡಿದ್ದಾರೆ. ನವೆಂಬರ್ 1ರಿಂದ 15 ದಿನಗಳು ಅಭಿಯಾನಕ್ಕೆ ದಳಪತಿಗಳು ಸಜ್ಜಾಗಿದ್ದು, ರಾಷ್ಟ್ರೀಯ ಪಕ್ಷಗಳ ನಡುವೆ ಕನ್ನಡ ಉಳಿವು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಸಂದೇಶ ರವಾನೆ ಬಗ್ಗೆ ಸಭೆಯಲ್ಲಿ ಸಂಪೂರ್ಣ ರೂಪುರೇಷೆ ಸಿದ್ಧತೆ ನಡೆಸಿದ್ದು, ಅಭಿಯಾನ ಯಶಸ್ವಿಗೊಳಿಸಲು ಪದಾಧಿಕಾರಿಗಳ ಜೊತೆ ಹೆಚ್​ಡಿಕೆ ಚರ್ಚೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES