Monday, December 23, 2024

52ನೇ ವಸಂತಕ್ಕೆ ಕಾಲಿಟ್ಟ ಅನಿಲ್ ಕುಂಬ್ಳೆ

ಇಂದು ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಟೀಂ ಇಂಡಿಯಾ ಕಂಡ ಲೆಜೆಂಡರಿ ಸ್ಪಿನ್ನರ್​ಗಳಲ್ಲಿ ಕುಂಬ್ಳೆ ಮೊದಲಿಗರು. ಟೆಸ್ಟ್ ಕ್ರಿಕೆಟ್​ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಕುಂಬ್ಳೆ ಮಾಡಿದ್ದ 10 ವಿಕೆಟ್​ಗಳ ದಾಖಲೆಯನ್ನು ಯಾರಾದರು ಮರೆಯುವುದುಂಟ. ಹೀಗೆ ದಶಕಗಳ ಕಾಲ ಟೀಂ ಇಂಡಿಯಾವನ್ನು ಆಳಿದ ಅನಿಲ್ ಕುಂಬ್ಳೆ, ಲೆಗ್ ಸ್ಪಿನ್‌ಗೆ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಮಾಸ್ಟರ್ ಆಗಿದ್ದರು. ಇದರಿಂದಾಗಿಯೇ ಈ ಸ್ಪಿನ್ ಲೋಕದ ಮಾಂತ್ರಿಕನಿಗೆ ‘ಜಂಬೋ’ ಎಂಬ ಅಡ್ಡ ಹೆಸರು ಕೂಡ ಇದೆ.

ಈ ಹಿಂದೆ ಅಭಿಮಾನಿಯೊಬ್ಬರ ಈ ಪ್ರಶ್ನೆಗೆ ಉತ್ತರಿಸಿದ್ದ ಅನಿಲ್ ಕುಂಬ್ಳೆ, ನನ್ನ ಅಡ್ಡಹೆಸರು ಜಂಬೋ. ಈ ಹೆಸರನ್ನು ನನಗೆ ಕೊಟ್ಟಿದ್ದು ನವಜೋತ್ ಸಿಂಗ್ ಸಿಧು. ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಇರಾನಿ ಟ್ರೋಫಿಯಲ್ಲಿ ಸಿಧು ನನಗೆ ಈ ಅಡ್ಡ ಹೆಸರನ್ನಿಟ್ಟರು. ನಾನು ಎಸೆದ ಒಂದು ಚೆಂಡು ತುಂಬಾ ಬೌನ್ಸ್ ಆಯಿತು. ಈ ಎಸೆತವನ್ನು ಕಂಡ ಸಿಧು, ‘ಜಂಬೋ ಜೆಟ್’ ಎಂದು ಕರೆದರು. ನಂತರ ‘ಜೆಟ್’ ಪದವನ್ನು ಕೈಬಿಟ್ಟು, ನನ್ನ ತಂಡದ ಸದಸ್ಯರು ನನ್ನನ್ನು ಜಂಬೋ ಎಂದು ಕರೆಯಲು ಪ್ರಾರಂಭಿಸಿದರು ಎಂಬ ಸ್ವಾರಸ್ಯಕರ ಮಾಹಿತಿಯನ್ನು ಕುಂಬ್ಳೆ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES