Monday, December 23, 2024

ಮುರುಘಾ ಶ್ರೀ ಮತ್ತೊಂದು ಮುಖವಾಡ ಬಟಾಬಯಲು

ಮೈಸೂರು : ಮುರುಘಾ ಶ್ರೀ ಮತ್ತೊಂದು ಮುಖವಾಡ ಬಟಾಬಯಲಾಗಿದ್ದು, FIRನಲ್ಲಿ ಆಘಾತಕಾರಿ ಅಂಶಗಳು ದಾಖಲಾಗಿದೆ.

ಅಪ್ರಾಪ್ತ ಬಾಲಕಿಯರೇ ಮುರುಘಾ ಶ್ರೀ ಟಾರ್ಗೆಟ್​ ಆಗಿದ್ದು, ಋತುಮತಿ ಆಗದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಋತುಮತಿ ಆಗುವ ತನಕ ನಿರಂತರ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ಬಾಲಕಿಯರನ್ನ ಒತ್ತಾಯಪೂರ್ವಕವಾಗಿ ಶ್ರೀಗಳ ಕೊಠಡಿಗೆ ಕಳುಹಿಸಲಾಗ್ತಿತ್ತು.ಅದಲ್ಲದೇ, ಮಕ್ಕಳು ಶರಣರ ಕೊಠಡಿಗೆ ಹೋಗದಿದ್ರೆ ಹೆದರಿಸಿ ಕಳುಹಿಸುತ್ತಿದ್ದರು.

ಅದಲ್ಲದೇ, ಬರೋಬ್ಬರಿ 7 ಮಂದಿಗೆ ಪೋಕ್ಸೊ ಉರುಳು ಸುತ್ತಿಕೊಂಡಿದ್ದು, ಆರೋಪಿ-1 ಮುರುಘಾ ಶೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಆರೋಪಿ-2 ವಾರ್ಡನ್ ರಶ್ಮಿ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-3 ಬಸವಾದಿತ್ಯಾ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-4 ಪರಮಶಿವಯ್ಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-5 ಗಂಗಾಧರಯ್ಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-6 ಮಹಾಲಿಂಗ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ, ಆರೋಪಿ-7 ಕರಿಬಸಪ್ಪ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು  ಆರೋಪಿಸಲಾಗಿದೆ.

RELATED ARTICLES

Related Articles

TRENDING ARTICLES