Monday, December 23, 2024

ಕಾಂತಾರ ವೀಕ್ಷಕನಿಗೆ ದೈವ ಆವಾಹನೆ.. ಬೆಚ್ಚಿ ಬಿದ್ದ ಪ್ರೇಕ್ಷಕ

ರಿಲೀಸ್​ ಆದ ಎಲ್ಲಾ ಥಿಯೇಟರ್​ಗಳಲ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಕಾಂತಾರ ಚಿತ್ರಕ್ಕೆ ಇಡೀ ಸಿನಿದುನಿಯಾನೆ ಶೇಕ್​ ಆಗಿದೆ. ಕರಾವಳಿಯ ದೈವ ಕಂಡು ಚಿತ್ರಪ್ರೇಮಿಗಳು ಮಂತ್ರಮುಗ್ಧವಾಗಿದ್ದಾರೆ. ರೋಮಾಂಚನ ಎನಿಸೋ ಕರಾವಳಿ ಕೋಲಗಳ ಭಕ್ತಿಯ ಭಾವಕ್ಕೆ ಚಿತ್ರರಂಗ ಥಂಡಾ ಹೊಡೆದಿದೆ. ಯೆಸ್​​​.. ಇದಕ್ಕೆ ಸಾಕ್ಷಿಯಾಗಿ ಥಿಯೇಟರ್​​ನಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ಏನ್​ ವಿಷ್ಯ ಅಂತೀರಾ..? ನೀವೇ ಓದಿ.

  • ಕ್ಲೈಮ್ಯಾಕ್ಸ್​ ನೋಡ್ತಿದ್ದಂತೆ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿ..!

ರಿಷಬ್​​ ಶೆಟ್ಟಿ ನಿರ್ದೇಶನದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿರೋ ಬ್ಲಾಕ್​​ಬಸ್ಟರ್​ ಸಿನಿಮಾ ಕಾಂತಾರ. ರಿಲೀಸ್​ ಆದ ಎಲ್ಲಾ ಥಿಯೇಟರ್​ಗಳಲ್ಲೂ ಹೌಸ್​​ಫುಲ್​ ಪ್ರದರ್ಶನ ಕಂಡು ಕೋಟಿ ಕೋಟಿ ಕಲೆಕ್ಷನ್​ ಕೊಳ್ಳೆ ಹೊಡೆದ ಅಪರೂಪದ ಸಿನಿಮಾ. ಹೊಂಬಾಳೆ ಬ್ಯಾನರ್​ನಲ್ಲಿ ಮೋಡಿ ಮಾಡಿದ ಕಾಂತಾರ ಸ್ಯಾಂಡಲ್​ವುಡ್​​ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಭಾಷೆಗೂ ಡಬ್​ ಆಗಿ ಅಬ್ಬರಿಸೋಕೆ ತುದಿಗಾಲಲ್ಲಿ ನಿಂತಿರೋ ಸೂಪರ್​ ಹಿಟ್​ ಸಿನಿಮಾ.

ಕಾಂತಾರ. ಇಂದು ಇದು ಕೇವಲ ಸಿನಿಮಾ ಆಗಿ ಉಳಿದಿಲ್ಲ. ಕಲೆ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳ ಸಾಂಕೇತಿಕವಾಗಿ ಸದ್ದು ಮಾಡ್ತಿದೆ. ಕರಾವಳಿ ಮಣ್ಣಿನ ದೇಸಿ ಧಾರ್ಮಿಕ ಸಂಪ್ರದಾಯಗಳು ಇಡೀ ಚಿತ್ರರಸಿಕರ ನಿದ್ದೆಗೆಡಿಸಿದೆ. ಕೇವಲ ಕನ್ನಡದಲ್ಲಿ ತೆರೆ ಕಂಡಿದ್ದ ಕಾಂತಾರ ಇಂದು ಪರಭಾಷೆಗಳಿಗೆ ಡಬ್​ ಆಗ್ತಿದೆ. ಈ ನಡುವೆ ಥಿಯೇಟರ್​ನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಕ್ಲೈಮ್ಯಾಕ್ಸ್​​​ ನೋಡ್ತಿದ್ದಂತೆ ವ್ಯಕ್ತಿಯೊಬ್ಬನ ಮೈಮೇಲೆ ದೈವದ ಆಹಾವನೆಯಾಗಿದೆ.

  • ಹಿಂದೆಯೂ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದ ಮಂಗಳೂರು
  • ಪರಭಾಷಿಗರ ನಿದ್ದೆಗೆಡಿಸಿದ ರೋಚಕ ಕಹಾನಿ ಕಾಂತಾರ..!

ಇಂದು ಕನ್ನಡ ಚಿತ್ರರಂಗದಲ್ಲಿ ಶಟ್ರಿಗೆ ಶುಭಕಾಲ ಶುರುವಾಗಿದೆ. ರಿಷಬ್​​​, ರಕ್ಷಿತ್​​​, ರಾಜ್​​​ ಬಿ. ಶೆಟ್ಟಿ ಸಿನಿಮಾಗಳು ಬಾಕ್ಸ್​​ಆಫೀಸ್​ ಲೂಟಿ ಮಾಡ್ತಿವೆ. ಇವ್ರ ಕ್ರಿಯೇಟಿವಿಟಿಗೆ ಪ್ರೇಕ್ಷಕರು ಶಹಬ್ಬಾಸ್​​ ಅಂತಿದ್ದಾರೆ. ಇದೀಗ ಕಾಂತಾರ ಸರದಿ. ರಿಷಬ್​ ಅಭಿನಯಕ್ಕೆ ಚಿತ್ರರಸಿಕರು ಮಾರು ಹೋಗಿದ್ದಾರೆ.

ಯೆಸ್​​.. ಪ್ರೇಕ್ಷಕರು ಕ್ಲೈಮ್ಯಾಕ್ಸ್​ ಸೀನ್​​​​​​​ ನೋಡಿ ಸ್ಟನ್​ ಆಗಿದ್ದಾರೆ. ಇದೀಗ ಥಿಯೇಟರ್​ನಲ್ಲಿ ಎಲ್ರೂ ಮೌನವಾಗಿ ಸಿನಿಮಾ ಕ್ಲೈಮ್ಯಾಕ್ಸ್ ಸೀನ್​​​​ ನೋಡುವಾಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಕಿರುಚಾಡಿದ್ದಾನೆ. ಮೈ ಮೇಲೆ ದೇವರು ಬಂದಂತೆ ವಿಚಿತ್ರವಾಗಿ ವರ್ತಿಸಿದ್ದಾನೆ. ಇದ್ದಕ್ಕಿದ್ದಂತೆ ಹೀಗೆ ಕೂಗಾಡಿದ್ದನ್ನು ಕಂಡು ಎಲ್ರು ಬೆಚ್ಚಿ ಬಿದ್ದಿದ್ದಾರೆ. ಈ ಹಿಂದೆಯೋ ಮಂಗಳೂರಿನಲ್ಲಿ ಇದೇ ರೀತಿಯ ಪ್ರಸಂಗ ನಡೆದಿತ್ತು.

ಮಂಗಳೂರಿನಲ್ಲಿ ಈ ಚಿತ್ರದಲ್ಲಿನ ದೈವಕ್ಕೆ ಅಪಾರ ಭಕ್ತಿ ಇದೆ. ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಹೀಗೆ ಅನೇಕ ದೈವರಾಧನೆಗೆ ಕರಾವಳಿ ಹೆಸರಾಗಿದೆ. ಹೆಚ್ಚಾಗಿ ನಂಬುವ ಭಕ್ತರಿಗೆ ಸಿನಿಮಾ ನೋಡುವಾಗ ಈ ರೀತಿ ದೈವ ಆಹಾವನೆಯಾಗೋದು ಸಾಮಾನ್ಯ ಅಂತಾರೆ ಸ್ಥಳಿಯರು. ಎನಿವೇ, ಕಾಂತಾರ ಪ್ರಕೃತಿ ಹಾಗೂ ಮನುಷ್ಯನ ಸಂಘರ್ಷಗಳಿಗೆ ಹೊಸ ಪರಿಕಲ್ಪನೆ ಕೊಟ್ಟಿದ್ದು ವಿಶೇಷ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES