Wednesday, January 22, 2025

ಧ್ರುವ ಚಿತ್ರದಲ್ಲಿ ಸಂಜು, ಶಿಲ್ಪಾ, ಲಾಲ್.. ಪ್ರೇಮ್ ಸೆನ್ಸೇಷನ್

ಮಾರ್ಟಿನ್​​​ ಸಿನಿಮಾ ತೆರೆಗೆ ಬರೋಕೂ ಮುನ್ನ ಜೋಗಿ ಪ್ರೇಮ್​​​​​​​, ಧ್ರುವ ಸರ್ಜಾ ಕಾಂಬಿನೇಷನ್​​ನಲ್ಲಿ ಹೈ ವೋಲ್ಟೇಜ್​ ಸಿನಿಮಾ ಸೆಟ್ಟೇರಿದೆ. ಪ್ರೇಮ್​​ ಸಿನಿಮಾ ಅಂದ್ಮೇಲೆ ಅಬ್ಬರ, ಆಡಂಭರ ಕೇಳ್ಬೇಕಾ..? ಯೆಸ್​​.. ಘಟಾನುಘಟಿ ಸ್ಟಾರ್​​ಗಳು ಈ ಸಿನಿಮಾಗೆ ಬಣ್ಣ ಹಚ್ಚೋಕೆ ಸಜ್ಜಾಗಿದ್ದಾರೆ. ಕೋಟಿ ಕೋಟಿ ವೆಚ್ಚದಲ್ಲಿ ಮೂಡಿ ಬರ್ತಿರೋ ಅದ್ಧೂರಿ ಚಿತ್ರದಲ್ಲಿ ಯಾರೆಲ್ಲಾ ಇರ್ತಾರೆ ಗೊತ್ತಾ..? ನೀವೇ ಓದಿ.

ಏಳು ಭಾಷೆಗಳಲ್ಲಿ ಜೋಗಿ ಪ್ರೇಮ್​​​​ ಹೈ ಬಜೆಟ್​​​ ಸಿನಿಮಾ..!

ಕನ್ನಡದ ಸ್ಟಾರ್​ ಡೈರೆಕ್ಟರ್​​ಗಳಲ್ಲಿ ಪ್ರೇಮ್​​​ ಮೊದಲ ಸಾಲಿನಲ್ಲಿ ನಿಲ್ತಾರೆ. ಕಥೆಯ ಆಯ್ಕೆ ಇಂದ ಹಿಡಿದು ಮೇಕಿಂಗ್​​​ ಸ್ಟೈಲ್​​​​​ನಲ್ಲೂ ಎಲ್ಲೂ ರಾಜಿಯಾಗದ ಕಾಸ್ಟ್ಲಿ ನಿರ್ದೇಶಕ. ಪ್ರಚಾರದ ವಿಚಾರದಲ್ಲೂ ಕೋಟಿ ಕೋಟಿ ಹಣವನ್ನು ನೀರಿನಂತೆ ಚೆಲ್ಲೋ ನಿಸ್ಸೀಮ. ಯೆಸ್​​.. ಜೋಗಿ ಪ್ರೇಮ್​​ ನಿರ್ದೇಶನದ ಹೊಸ ಸಿನಿಮಾ ರಿಲೀಸ್​ಗೂ ಮುನ್ನವೇ ಕುತೂಹಲದ ಕಿಡಿ ಹಾರಿಸಿದೆ. ಅಬ್ಬಬ್ಬಾ..! ಇಷ್ಟೊಂದು ಸ್ಟಾರ್​ ಕಲಾವಿದ್ರು ಸಿನಿಮಾದಲ್ಲಿ ಇರ್ತಾರಾ ಅಂತಾ ಅಚ್ಚರಿ ಮೂಡಿಸಿದೆ.

ಧ್ರುವ ಸರ್ಜಾ ಅಭಿನಯದ ಮೋಸ್ಟ್​ ಎಕ್ಸ್​​ಪೆಕ್ಟೆಡ್​​ ಸಿನಿಮಾ ಮಾರ್ಟಿನ್​​​​ ಸ್ಯಾಂಪಲ್​ ವೀಡಿಯೋಗಳ ಮೂಲಕ ಕಮಾಲ್​ ಮಾಡ್ತಿದೆ. ಈ ನಡುವೆ ಮಾರ್ಟಿನ್​​ ನೆಕ್ಸ್ಟ್​​ ಪ್ರಾಜೆಕ್ಟ್​​ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಯೆಸ್​​​​.. ಬರೋಬ್ಬರಿ ಏಳು ಭಾಷೆಗಳಲ್ಲಿ ಮೂಡಿ ಬರ್ತಿರೋ ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಅಧೀರ ಸಂಜಯ್ ದತ್​​, ಮೋಹನ್​ಲಾಲ್​​​, ಬಳುಕೋ ಬಳ್ಳಿ ಶಿಲ್ಪಾ ಶೆಟ್ಟಿ ಆ್ಯಕ್ಟ್​​ ಮಾಡ್ತಿದ್ದಾರೆ. ಈ ಸುದ್ದಿ ಕೇಳ್ತಿದ್ದ ಹಾಗೆ ಚಿತ್ರರಸಿಕರ ಎದೆಯಲ್ಲಿ ಕುತೂಹಲದ ಕಿಚ್ಚು ಹೊತ್ತಿದೆ.

  • ಸಿನಿ ಇತಿಹಾಸದಲ್ಲಿ ಸೆನ್ಸೇಷನಲ್​ ದಾಖಲೆಗೆ ಕೌಂಟ್​ಡೌನ್​​​​​​..!
  • ಅಕ್ಟೋಬರ್​ 21ಕ್ಕೆ ಅದ್ಧೂರಿ ಟೈಟಲ್​ ಲಾಂಚ್​ ಕಾರ್ಯಕ್ರಮ

ಯೆಸ್​.. ಪ್ರೇಮ್​ ಸಿನಿಮಾಗಳಂದ್ರೆ ಅದ್ಧೂರಿತನಕ್ಕೆ ಕೊರತೆ ಇಲ್ಲ. ಜೋಗಯ್ಯ, ದಿ ವಿಲನ್​​, ಏಕ್​ ಲವ್​ ಯಾ ಸಿನಿಮಾಗಳಲ್ಲೂ ಪ್ರೇಮ್​​ ಪ್ರಾಮಿಸಿಂಗ್​ ಡೈರೆಕ್ಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಕೆವಿಎನ್​​ ಪ್ರೊಡಕ್ಷನ್​ ಜತೆ ಕೈಜೋಡಿಸಿರುವ ಜೋಗಿ ಪ್ರೇಮ್​​ ಸೌತ್​ ಟು ನಾರ್ಥ್​​ ಆರು ಬಿಗ್​ ಸ್ಟಾರ್​ಗಳಿಗೆ ಬಲೆ ಬೀಸಿದ್ದಾರೆ. ಈಗಾಗ್ಲೇ ಸಂಜಯ್​ ದತ್​​​, ಮೋಹನ್​ಲಾಲ್​, ಶಿಲ್ಪಾ ಶೆಟ್ಟಿ ಟೈಟಲ್​ ಲಾಂಚ್​ ಸಮಾರಂಭದಲ್ಲಿ ಗೆಸ್ಟ್​​​ಗಳಾಗಿ ಆಗಮಿಸಲಿದ್ದಾರೆ.

ಕೆವಿಎನ್​ ಸಂಸ್ಥೆಯಲ್ಲಿ ಮೂಡಿ ಬರ್ತಿರೋ ಮತ್ತೊಂದು ಹೈ ಬಜೆಟ್​ ಸಿನಿಮಾ ಇದಾಗಿದ್ದು ಸಖತ್​ ರಿಚ್​ ಆಗಿ ತೆರೆಗೆ ತರೋ ಪ್ಲಾನ್​ ನಡಿತಿದೆ. ಜತೆಗೆ ಕನ್ನಡದ ರಮೇಶ್​ ಅರವಿಂದ್​, ವಿ. ರವಿಚಂದ್ರನ್​ ಕೂಡ ಪ್ರೇಮ್​​ ಟೀಮ್​ ಸೇರಿಕೊಳ್ಳಲಿದ್ದಾರೆ. ಬಜೆಟ್​ ವಿಚಾರದಲ್ಲಿ ಕಾಂಪ್ರಮೈಸ್​ ಆಗದೆ ಕಟ್ಟು ಮಸ್ತಿನ ಮಸ್ತ್​ ಪೈಲ್ವಾನ್ ದ್ರುವ ಸರ್ಜಾ ಸಿನಿಮಾ ತಯರಾಗಲಿದೆ.

ಆರು ವರ್ಷಗಳ ಹಿಂದೆ ಜೋಗಿ ಪ್ರೇಮ್​ ಅಭಿಮಾನಿಗಳಿಗೆ ಒಂದು ವಚನ ಕೊಟ್ಟಿದ್ದು ಎಲ್ರಿಗೂ ನೆನಪಿದೆ. ಅರು ಬಿಗ್​ ಸ್ಟಾರ್​​​ಗಳ ಜತೆಗೆ ಹೈ ಬಜೆಟ್​​ನಲ್ಲಿ ಒಂದು ಸಿನಿಮಾ ಮಾಡ್ತೀನಿ, ಅದೊಂದು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯುತ್ತೆ ಅಂತಾ. ಯೆಸ್​​.. ಇದೀಗ  ಆ ಮಾತು ಸತ್ಯವಾಗಿದೆ. ಅದ್ಧೂರಿಯಾಗಿ ಮುಹೂರ್ತ ಮುಗಿಸಿರೋ ಚಿತ್ರತಂಡ ಸದ್ಯದಲ್ಲೇ ಮತ್ತಷ್ಟು ಗುಡ್​ ನ್ಯುಸ್​ ಕೊಡೋ ತವಕದಲ್ಲಿದೆ. ಎನಿವೇ ಆಲ್​ ದಿ ಬೆಸ್ಟ್​​​​ ಟೀಮ್​​​.

ರಾಕೇಶ್​ ಆರುಂಡಿ , ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES