ಬೆಂಗಳೂರು : ಕಂದಾಯ ಇಲಾಖೆ, BBMP ನಡುವೆ ಇಲ್ಲ ಹೊಂದಾಣಿಕೆ ಇಂದೂ ಕೂಡ ದೊಡ್ಡ ಕುಳಗಳ ಒತ್ತುವರಿ ತೆರವು ಡೌಟ್ ಆಗಿದೆ.
ನಗರದಲ್ಲಿಂದು ಕಳೆದ 3 ದಿನಗಳಿಂದ ಎರಡು ಕಡೆ ಮಾತ್ರ ತೆರವು ನಡೆಸ್ತಿರೋ ಪಾಲಿಕೆ, ಬಾಕಿ ಆಸ್ತಿಗಳಿಗೆಲ್ಲಾ ಸ್ಟೇ ಇದೆ ಎಂದು ಪಾಲಿಕೆ ಕಾರಣ ನೀಡ್ತಿದೆ. ಕೋರ್ಟ್ ಜಂಟಿ ಸರ್ವೆ ಮಾಡಿ ಆಸ್ತಿ ವಶಕ್ಕೆ ಆದೇಶಿಸಿದ್ರೂ ಮೀನಾಮೇಷ ಮಾಡಿದ್ದು, ಈ ಬಾರಿಯೂ ಕಂದಾಯ ಇಲಾಖೆ, BBMP ನಡುವೆ ಇಲ್ಲ ಹೊಂದಾಣಿಕೆ ಇಂದೂ ಕೂಡ ದೊಡ್ಡ ಕುಳಗಳ ಒತ್ತುವರಿ ತೆರವು ಡೌಟ್ ಆಗಿದೆ.
ಇದುವರೆಗೂ ಸರ್ವೆಯನ್ನೇ ನಡೆಸದೇ ಕುಳಿತ ಕಂದಾಯ ಇಲಾಖೆ, K.R.ಪುರಂ ವ್ಯಾಪ್ತಿಯ ಶೀಲವಂತ ಕೆರೆ ಭಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು, ನಿನ್ನೆ ದಂಪತಿ ಸೂಸೈಡ್ ಡ್ರಾಮಕ್ಕೆ ಸಾಕ್ಷಿಯಾಗಿದ್ದ ಒತ್ತುವರಿ ತೆರವು ಮಾಡಿದ್ದಾರೆ. ಆದರೆ ಇಂದು ಅದೇ ಭಾಗದಲ್ಲಿ ಬಾಕಿ ಇರೋ 5 ಮನೆ ತೆರವು ಮಾಡಲಿರೋ ಪಾಲಿಕೆ ಎರಡನೇ ಹಂತದ ತೆರವು ಕಾರ್ಯಾಚರಣೆ ಆಮೆಗತಿಯಲ್ಲಿ ಸಾಗುತ್ತಿದೆ.