Sunday, December 22, 2024

ಸೂಪರ್ ಸ್ಟಾರ್ ಉಪ್ಪಿ ‘U & I’ಗೆ ಹೊಸಪೇಟೆ ‘ಪವರ್’..!

ತಲೆಗೆ ಮೂರು ನಾಮ ಹಾಕಿಕೊಂಡು ಎಲ್ಲರ ತಲೆಗೆ ಕಂಬಳಿ ಹುಳ ಬಿಟ್ಟಿದ್ದ ಅಸಮಾನ್ಯ ಬುದ್ಧಿವಂತ ನಿರ್ದೇಶಕ ಉಪೇಂದ್ರ. ವರ್ಲ್ಡ್​​​ ವೈಡ್​​ ಟೀಸರ್​ ಮೂಲಕ ಸಂಚಲನ ಮೂಡಿಸಿರೋ ಕಬ್ಜ ಚಿತ್ರದಲ್ಲಿ ಸಖತ್​ ಬ್ಯುಸಿ ಇರೋ ಉಪ್ಪಿ ಯು ಅಂಡ್​​​ ಐ ಚಿತ್ರದ ಶೂಟಿಂಗ್​​ನಲ್ಲೂ ಆ್ಯಕ್ಟಿವ್​​ ಆಗಿದ್ದಾರೆ. ಈ ನಡುವೆ ಪವರ್ ಸ್ಟಾರ್ ಪುನೀತ್​​​​​​​​ ಹಾಗು ರಿಯಲ್​ ಸ್ಟಾರ್​​ ಉಪ್ಪಿ ಹೊಸಪೇಟೆಯಲ್ಲಿ ಮುಖಾಮುಖಿಯಾಗಿದ್ದು ಪ್ರೇಕ್ಷಕರು ಸಖತ್​ ಥ್ರಿಲ್ ಆಗಿದ್ದಾರೆ.

  • ಹಂಪಿ ವಿರೂಪಾಕ್ಷನ ದಿವ್ಯ ಸನ್ನಿಧಿಯಲ್ಲಿ ರಿಯಲ್​ ಸ್ಟಾರ್

​​​​​ಉಪೇಂದ್ರ. ಈ ಹೆಸ್ರು ಕೇಳ್ತಿದ್ದ ಹಾಗೆ ಮೈ ರೋಮಾಂಚನವಾಗುತ್ತೆ. ಅವ್ರ ಸಿನಿಮಾಗಳ ಪುಟಗಳನ್ನು ಮೆಲುಕು ಹಾಕಿದ್ರೆ ಅರೆಕ್ಷಣ ಮೈ ಜುಮ್ಮೆನ್ನುತ್ತೆ. ಫಾದರ್​ ಆಫ್​ ಆಲ್​ ಡೈರೆಕ್ಟರ್​​ ಉಪೇಂದ್ರ. ಪ್ರಯೋಗಗಳಿಗೆ ಮುನ್ನುಡಿ ಬರೆದ ಹಠವಾದಿ. ಬುದ್ಧಿವಂತರಿಗಾಗಿಯೇ ಸಿನಿಮಾ ಮಾಡಿದ ಕ್ರಿಯೇಟಿವ್​​​​ ಹೆಡ್​​​. ಇದೀಗ ಉಪ್ಪಿ ಅಂಗೈಯಲ್ಲಿ ಕಬ್ಜ ಹಾಗೂ ಯು ಅಂಡ್​ ಐ ಸಿನಿಮಾಗಳಿವೆ. ಅದ್ರಲ್ಲಿ ಉಪ್ಪಿ ನಿರ್ದೇಶನದ ಯುಐ ಸಿನಿಮಾ ಸಖತ್​ ಹೈಪ್​ ಕ್ರಿಯೇಟ್​ ಮಾಡಿದೆ.

ಉಪ್ಪಿ ಡೈರೆಕ್ಷನ್​ ಸಿನಿಮಾ ಅಂದ್ರೆ ಇಡೀ ಸಿನಿದುನಿಯಾ ತಲೆಕೆಡಿಸಿಕೊಳ್ಳುತ್ತೆ. ಕಥೆ, ಸಂಭಾಷಣೆ, ಆ್ಯಕ್ಟಿಂಗ್​​​, ಕ್ಲೈಮ್ಯಾಕ್ಸ್​​ ಎಲ್ಲವೂ ಎಲ್ಲರಿಗಿಂತ ಭಿನ್ನ ವಿಭಿನ್ನವಾಗಿರುತ್ತೆ. ಇದೀಗ ಉಪ್ಪಿ ಯು ಅಂಡ್ ಈ ಚಿತ್ರದ ಶೂಟಿಂಗ್​ಗಾಗಿ ಹೊಸ ಪೇಟೆಗೆ ಎಂಟ್ರಿ ಕೊಟ್ಟಿದ್ದಾರೆ. ಕೃಷ್ಣದೇವರಾಯನ ಐತಿಹಾಸಿಕ ಮಣ್ಣಿನಲ್ಲಿ, ವಿರೂಪಾಕ್ಷನ ದಿವ್ಯ ಸಾನಿಧ್ಯದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಪಂಪಾದೇವಿ, ಭುವನೇಶ್ವರಿ ದೇವಿ, ವಿಜಯವಿಠಲನ ಆಶೀರ್ವಾದದೊಂದಿಗೆ ಯುಐಗೆ ಕಿಕ್​ಸ್ಟಾರ್​​​ ಕೊಟ್ಟಿದ್ದಾರೆ.

  • ಅಪ್ಪು ಪುತ್ಥಳಿಯ ಮುಂದೆ ರಿಯಲ್​​ ಸ್ಟಾರ್​ ಹೇಳಿದ್ದೇನು..?
  • ಬುದ್ಧಿವಂತನ ಸಿನಿಮಾದಲ್ಲಿ ಜನ ಸಾಮಾನ್ಯರಿಗೂ ಅವಕಾಶ

ಉಪ್ಪಿ ಏಳು ವರ್ಷಗಳ ನಂತ್ರ ವಿಭಿನ್ನ ಪ್ರಯತ್ನದೊಂದಿಗೆ ಡೈರೆಕ್ಷನ್​ಗೆ ಮರಳಿದ್ದಾರೆ. ಈಗಾಗ್ಲೇ ಚಿತ್ರದ ಟೈಟಲ್​​​ಗೆ ಎಲ್ಲರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಈ ನಡುವೆ ಚಿತ್ರತಂಡ ಹೊಸಪೇಟೆಯಲ್ಲಿ ಶೂಟಿಂಗ್​​​​​ಗಾಗಿ ಬೀಡು ಬಿಟ್ಟಿದೆ. ಮೂರು ದಿನಗಳ ಕಾಲ ನಗರದ ಸರಸ್ವತಿ, ಲಕ್ಷ್ಮಿ ಥಿಯೇಟರ್​ನಲ್ಲಿ ಚಿತ್ರದ ಕೆಲವು ತುಣುಕುಗಳ ಚಿತ್ರೀಕರಣ ನಡೆಯಲಿದೆ. ಜನಸಾಮಾನ್ಯರಿಗೂ ಅವಕಾಶವಿದ್ದು, ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಂಪರ್​ ಆಫರ್​​ ಸಿಕ್ಕಿದೆ.

ಇದ್ರ ಜತೆಗೆ, ಇತ್ತೀಚೆಗೆ ನಿರ್ಮಾಣ ಆಗಿರುವ ಅಪ್ಪು ಪುತ್ಥಳಿಗೆ ಭೇಟಿ ನೀಡಿದ ಉಪ್ಪಿ ಅಂಡ್​ ಟೀಮ್​​ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ. ಅಪ್ಪು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ರಿಯಲ್​ ಸ್ಟಾರ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ರು. ಅಪ್ಪು ತರಹ ಬದುಕಬೇಕು. ಹೂವಿನ ಹಾರ ಹಾಕಿ ಮನೆಗೆ ಹೋಗೋದಲ್ಲ. ಅವ್ರ ಗುಣ ಬೆಳೆಸಿಕೊಳ್ಳಿ ಎಂದ್ರು.

ವಿಜಯ ನಗರ ಸಾಮ್ಯಾಜ್ಯದ ಮಣ್ಣಿನ ಸುತ್ತಮುತ್ತ ಕೆಲವು ದಿನಗಳ ಕಾಲ ಯು ಅಂಡ್​ ಐ ಸಿನಿಮಾ ಶೂಟಿಂಗ್​ ನಡೆಯಲಿದೆ. ಕೆ.ಪಿ ಶ್ರೀಕಾಂತ್​ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರ್ತಿದೆ. ನನ್ನ ತಲೆ ಖಾಲಿ ಇದೆ, ಹಾಗಾಗಿ ಹೊಸ ಐಡಿಯಾ ಹೊಳೆಯುತ್ತದೆ ಎಂದಿದ್ದ ಉಪ್ಪಿ ಈ ಚಿತ್ರದ ಮೂಲಕ ಕ್ರಾಂತಿ ಮಾಡೋಕೆ ಹೊರಟಿದ್ದಾರೆ. ಚಿತ್ರದ ಸ್ಟಾರ್​ ಕಾಸ್ಟಿಂಗ್​​ ಬಗ್ಗೆ ಸದ್ಯದಲ್ಲೇ ಗೊತ್ತಾಗಲಿದೆ. ಎನಿವೇ ಉಪ್ಪಿ ಕನ್ನಡದ ಹೆಮ್ಮೆಯ ಪ್ರತೀಕ. ಆಲ್​ ದಿ ಬೆಸ್ಟ್​ ಉಪ್ಪಿ ಸರ್​​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ        

RELATED ARTICLES

Related Articles

TRENDING ARTICLES