Monday, December 23, 2024

ವಾಲ್ಮೀಕಿ ಜಯಂತಿಯಲ್ಲಿ ಶಾಸಕ-ತಹಶೀಲ್ದಾರ್ ನಡುವೆ ಜಟಾಪಟಿ

ದಾವಣಗೆರೆ; ಇಂದು ರಾಜ್ಯದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನಲೆಯಲ್ಲಿ ಜಯಂತಿಗೆ ಸರಿಯಾದ ವ್ಯವಸ್ಥೆ ಮಾಡದ ತಹಶೀಲ್ದಾರ್ ಅವರನ್ನ ಶಾಸಕ ಎಸ್ ರಾಮಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಹರಿಹರದ ತಾಲ್ಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 11 ಗಂಟೆಯಾದರು ಜಯಂತಿ ಆಚರಣೆ ಮಾಡದೇ ಹಾಗೂ ಸೂಕ್ತ ವ್ಯವಸ್ಥೆ ಮಾಡದೇ ಇರೋದಕ್ಕೆ ಹರಿಹರ ತಹಶೀಲ್ದಾರ್​ ಅಶ್ವಥ್ ನಿರ್ಲಕ್ಷ್ಯದ ವಿರುದ್ಧ ಎಸ್ ರಾಮಪ್ಪ ಅವರು ಕಿಡಿಕಾರಿದರು.

ತಹಶೀಲ್ದಾರ್ ಅವರು ವಾಲ್ಮೀಕಿ ಜಯಂತಿಗೆ ವ್ಯವಸ್ಥೆ ಮಾಡದೇ ಕುಂಟು ನೆಪ ಹೇಳಿದ ಹಿನ್ನಲೆಯಲ್ಲಿ ಹಾಗೂ ಆಚರಣೆಗೆ ತಡವಾಗಿ ಬಂದಿದ್ದಕ್ಕೆ ಗರಂ ಆದ ಶಾಸಕರು, ವಾಲ್ಮೀಕಿ ಜಯಂತಿಗೆ ವ್ಯವಸ್ಥೆಯನ್ನೆ ಮಾಡಿಲ್ಲ. ತಹಶೀಲ್ದಾರ್ ಆಗಿ ನಿಮಗೆ ಜವಾಬ್ದಾರಿ ಇಲ್ಲವೇ, ಪ್ರತಿ ಭಾರಿಯೂ ಬೇಜಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೀರಿ ಎಂದು ಶಾಸಕರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಈ ವೇಳೆ ಶಾಸಕರಿಗೆ ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಜಾರಿ ಕೊಳ್ಳುವ ಪ್ರಯತ್ನ ಮಾಡಿದರು. ಇದಕ್ಕೂ ಬಗ್ಗದ ಶಾಸಕರು ತರಾಟೆಗೆ ಒಳಪಡಿಸಿದರು. ಒಟ್ಟಿನಲ್ಲಿ ಶಾಂತವಾಗಿ ಆಚರಣೆ ಮಾಡಿಬೇಕಿದ್ದ ಹರಿಹರ ಮಹರ್ಷಿ ವಾಲ್ಮೀಕಿ ಜಯಂತಿ ಇಂದು ತಹಶೀಲ್ದಾರ್​ ಹಾಗೂ ಶಾಸಕರ ನಡುವೆ ಗದ್ದಲದಲ್ಲೇ ಮುಗಿವಂತಾಯಿತು.

RELATED ARTICLES

Related Articles

TRENDING ARTICLES