Wednesday, January 22, 2025

ಬೆಂಗಳೂರಿನಲ್ಲಿ ರೌಡಿಶೀಟರ್​​ನ ಭೀಕರ ಹತ್ಯೆ.

ಬೆಂಗಳೂರು : ತಡರಾತ್ರಿ ಆಟೋದಲ್ಲಿ ಬಂದು ರಾಹುಲ್ ನನ್ನ ಕೊಚ್ಚಿ ಕೊಲೆಗೈದು ಪರಾರಿಯಾದ ಘಟನೆ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ.

ರೌಡಿಶೀಟರ್ ರಾಹುಲ್ @ ಪಲ್ಲು ಕೊಲೆಯಾದ ವ್ಯಕ್ತಿ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರುವ ಆರೋಪಿಗಳು. ಇತ್ತೀಚಿಗಷ್ಟೇ ಜೈಲಿನಿಂದ ಹೊರಬಂದಿದ್ದ ರಾಹುಲ್. ಈ ಹಿಂದೆ ರೌಡಿಶೀಟರ್ ಪಾಲ್ ರವಿಯ ಹತ್ಯೆ ಕೇಸಲ್ಲಿ ಫಿಟ್ಟಾಗಿದ್ದ. ಅದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ರಾಮಮೂರ್ತಿ ನಗರ ರೌಡಿ ಪಾಲ್ ರವಿ ಮರ್ಡರ್ ಕೇಸಲ್ಲಿ ಫಿಟ್ಟಾಗಿದ್ದ. ಎ6 ಆರೋಪಿಯಾಗಿ ಕಾಣಿಸಿಕೊಂಡಿದ್ದ. ಜಾಮೀನಿನ ಮೂಲಕ ಹೊರಬಂದವ್ನು ಡಂಜೋ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ. ನಿನ್ನೆ ತಡರಾತ್ರಿ ಕೃಷ್ಣಯ್ಯನಪಾಳ್ಯದ ಆಟೋ ಸ್ಟ್ಯಾಂಡಿಗೆ ರಾಹುಲ್ ಹೋಗಿದ್ದ. ಇದೇ ವೇಳೆ ಸತ್ಯವೇಲು ಹಾಗೂ ಮುರುಗನ್ ಎಂಬ ಆಟೋ ಚಾಲಕರ ನಡುವೆ ಗಲಾಟೆ ಅತಿರೇಕಕ್ಕೆ ಹೋಗಿತ್ತು. ಮುರುಗನ್ ರಾಹುಲ್​​ನ ಸ್ನೇಹಿತನಾಗಿದ್ದ. ಅದಕ್ಕಾಗಿ ರಾಹುಲ್ ಮುರುಗನ್ ಪರವಾಗಿ ಗಲಾಟೆಗೆ ಇಳಿದಿದ್ದ. ತಾನು ರೌಡಿಶೀಟರ್ ಮುಗಿಸೇಬಿಡ್ತೀನಿ ಅಂತ ಸತ್ಯವೇಲು ಹಾಗೂ ಅರುಣ್ ಎಂಬವರಿಗೆ ಆವಾಜ್ ಹಾಕ್ತಾನೆ. ಇದರಿಂದ ಸಿಟ್ಟಿಗೆದ್ದ ಆಟೋಚಾಲಕರಾದ ಅರುಣ್ ಹಾಗೂ ಸತ್ಯವೇಲು ರಾಹುಲ್ ಗೆ ಸ್ಕೆಚ್ ಹಾಕ್ತಾರೆ. ಅದರಂತೆ ನಿನ್ನೆ ತಡರಾತ್ರಿ ಆಟೋದಲ್ಲಿ ಬಂದು ರಾಹುಲ್ ನನ್ನ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಸದ್ಯ ಪ್ರಕರಣ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES