Thursday, December 19, 2024

ಭ್ರಷ್ಟರು ರಸ್ತೆಗೆ ಬಂದು ಡ್ಯಾನ್ಸ್, ಓಡಾಟ ಮಾಡುತ್ತಿದ್ದಾರೆ : ಬಸನಗೌಡ ಪಾಟೀಲ್​​

ವಿಜಯಪುರ : ಭ್ರಷ್ಟರು ರಸ್ತೆಗೆ ಬಂದು ಡ್ಯಾನ್ಸ್, ಓಡಾಟ ಮಾಡುತ್ತಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟರು ರಸ್ತೆಗೆ ಬಂದಿದ್ದಾರೆ. ಭ್ರಷ್ಟರು ರಸ್ತೆಗೆ ಬಂದು ಡ್ಯಾನ್ಸ್, ಓಡಾಟ ಮಾಡುತ್ತಿದ್ದಾರೆ. ಭ್ರಷ್ಟರೆಲ್ಲರನ್ನು ರೋಡಿಗೆ ತರುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಅದೇ ತರಹ ರಾಹುಲ್, ಸೋನಿಯಾ ಗಾಂಧಿ ಎಸಿ ಬಿಟ್ಟು ರೋಡಿಗೆ ಬಂದಿದ್ದಾರೆ ಎಂದರು.

ಇನ್ನು, ಕಾಂಗ್ರೆಸ್ ನಾಯಕರ ಬಣ್ಣ ಬಯಲು ಆಗುತ್ತಿದೆ. ಪಾಪ ಮಾಜಿ ಸಿಎಂ ಸಿದ್ದರಾಮಯ್ಯ‌ನ್ನು ಕರ್ಕೊಂಡು ಓಡ್ತಾ ಇದ್ದಾರೆ. ಇದು ಬಿಜೆಪಿ ಸಾಧನೆ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES