ಮೈಸೂರು: ಮೈಸೂರು ದಸರಾಗಾಗಿ ಸಾಂಸ್ಕೃತಿಕ ರಾಜಧಾನಿಗೆ ಬಂದಿದ್ದ ಗಜಪಡೆ ಅಭಿಮನ್ಯು ತಂಡಕ್ಕೆ ಇಂದು ಬಿಳ್ಕೊಡುಗೆ ಸಮಾರಂಭ ನಡೆಯಲಿದೆ.
ಮೂರನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದು, ಅಭಿಮನ್ಯುಗೆ ದಸರಾ ಮೆರವಣಿಗೆಯಲ್ಲಿ 9 ಆನೆಗಳು ಸಾಥ್ ನೀಡಿದ್ದವು. ಎರಡು ತಿಂಗಳ ಹಿಂದೆ ಅರಮನೆಗೆ ಗಜಪಡೆ ಬಂದಿದ್ದವು.
ಇಂದು ಬೆಳಿಗ್ಗೆ 11 ಕ್ಕೆ ಗಜಪಡೆಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಗುತ್ತದೆ. ನಾಡಿನಿಂದ ಮತ್ತೆ ಕಾಡಿಗೆ ಗಜಪಡೆ ಇಂದು ವಾಪಸ್ ಹೋಗಲಿವೆ.
ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಭೀಮ, ಧನಂಜಯ, ಮಹೇಂದ್ರ, ಶ್ರೀರಾಮ, ಸುಗ್ರೀವ, ಪಾರ್ಥಸಾರಥಿ, ಕಾವೇರಿ, ಚೈತ್ರ, ಲಕ್ಷ್ಮಿ, ವಿಜಯ, ಗೋಪಿ ಆನೆಗಳು ಮತ್ತು ಹೋಗುವಾಗ 15 ಆನೆಗಳು ಅಂದರೆ ಲಕ್ಷ್ಮಿಗೆ ದತ್ತಾತ್ರೇಯ ಎಂಬ ಗಂಡು ಮರಿಗೆ ಜನ್ಮ ನೀಡಿದ್ದು ಅದನ್ನು ಸಹ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಗುತ್ತದೆ.