Monday, December 23, 2024

ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ ಶುರುವಾಗಿದೆ : ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕದ ರಾಜ್ಯದಲ್ಲಿ ಭಾರತ್ ಜೋಡೋಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ವಿರುದ್ಧ ಜನರು ಬೇಸತ್ತಿದ್ದಾರೆ. ಕೋಮುವಾದದ ಮೂಲಕ ನರೇಂದ್ರ ಮೋದಿ ಒಡೆಯುವ ಕೆಲಸ ಮಾಡಿದ್ರು. ನಾವು ಇದೀಗ ಅದನ್ನ ಜೋಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇನ್ನು, ಜನಸಂಖ್ಯೆಯ ಆಧಾರದ ಮೇಲೆ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ೨೦೧೧ ರ ಜನಗಣತಿ ಪ್ರಕಾರ ೨೪.೧೦% ಜನಸಂಖ್ಯೆ ಇದೆ. ಆದ್ರೆ ಮೀಸಲಾತಿ ೧೮% ಇದೆ. ಮೀಸಲಾತಿಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಹಾಗಾಗಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹವಿದೆ. ನಾಗಮೋಹನ್ ದಾಸ್ ಆಯೋಗ ೨೦೨೦ ರಲ್ಲಿ ವರದಿ ಕೊಟ್ಟಿದ್ರು. ಬಿಜೆಪಿ ಸರ್ಕಾರ ಇತ್ತು. ವರದಿ ಬಂದು ಎರಡು ವರ್ಷ ಆಗಿದೆ. ಆದ್ರೆ ಇಲ್ಲಿಯವರೆಗೆ ವರದಿ ಜಾರಿಯಗಿಲ್ಲ ಎಂದು ಹೇಳಿದರು.

ಅದಲ್ಲದೇ, ಎಸ್ಟಿ ಸಮುದಾಯಕ್ಕೆ ೩ರಿಂದ ೭ % ಮೀಸಲಾತಿ ಹೆಚ್ಚಳವಾಗಬೇಕು. ಎಸ್ಸಿ ೧೫ ರಿಂದ ೧೭% ಮೀಸಲಾತಿ ಹೆಚ್ಚಳವಾಗಬೇಕು. ಬಿಜೆಪಿ ಮೀಸಲಾತಿಗೆ ವಿರೋಧ ಇದ್ದಾರೆ. ಕೇಂದ್ರ ಸರ್ಕಾರ ಸಾಮನ್ಯ ವರ್ಗಕ್ಕೆ ೧೦% ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಒಂದೆ ದಿನ ಮೀಸಲಾತಿ ಹೆಚ್ಚಳ‌ ಮಾಡಿದ್ದರೆ. ಬಿಜೆಪಿಗೆ ದಲಿತರ ಬಗ್ಗೆ ಮೊಸಳೆ ಕಣ್ಣಿರಿದೆ, ಕಾಳಜಿ ಇಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES