Monday, December 23, 2024

ನ್ಯೂಜಿಲೆಂಡ್​ಗೆ ಸಚಿವ ಎಸ್.ಜೈಶಂಕರ್ ಭೇಟಿ

ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಇಂದು ನ್ಯೂಜಿಲೆಂಡ್ ವಿದೇಶಾಂಗ ಸಚಿವ ನಾನಯಾ ಮಹುತಾ ಅವರೊಂದಿಗೆ ಆಕ್ಲೆಂಡ್‌ನಲ್ಲಿ ಮಾತುಕತೆ ನಡೆಸಿದರು.

ಕಾರ್ಯಕ್ರಮ ಕುರಿತು ಟ್ವಿಟ್ಟರ್​ನಲ್ಲಿ ಎಸ್‌.ಜೈಶಂಕರ್‌ ಮಾಹಿತಿ ಹಂಚಿಕೊಂಡಿದ್ದಾರೆ. ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುವ ಎರಡು ಸಮಾಜಗಳು ಹೆಚ್ಚು ಸಮಕಾಲೀನ ಸಂಬಂಧವನ್ನು ಬೆಸೆಯಲು ಪ್ರಯತ್ನಿಸುತ್ತಿವೆ. ನಾವು ನಮ್ಮ ಸಾಮರ್ಥ್ಯ, ವ್ಯಾಪಾರ, ತಂತ್ರಜ್ಞಾನ, ಡಿಜಿಟಲ್, ಶಿಕ್ಷಣ, ಪ್ರತಿಭೆ ಮತ್ತು ಕೃಷಿಗೆ ಉತ್ತೇಜನ ನೀಡುತ್ತೇವೆ.

ಭಾರತ ಮತ್ತು ನ್ಯೂಜಿಲೆಂಡ್‌ ಸಹಯೋಗದಲ್ಲಿ ಹವಾಮಾನ ಕ್ರಮ, ಸಾಂಕ್ರಾಮಿಕ ರೋಗಗಳು ಮತ್ತು ಕಡಲ ಭದ್ರತೆ ಸೇರಿದಂತೆ ಜಾಗತಿಕ ಸಮಸ್ಯೆಗಳನ್ನು ಎದುರಿಸುತ್ತೇವೆ ಎಂದಿದ್ದಾರೆ. ಇನ್ನು ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರ ಸಾಧನೆಗಳು ಮತ್ತು ಕೊಡುಗೆಗಳಿಗಾಗಿ ಅವರನ್ನು ಅಭಿನಂದಿಸುವ ಕಾರ್ಯಕ್ರಮವಿದೆ. ಹೀಗಾಗಿ ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಅವರೊಂದಿಗೆ ಜೈಶಂಕರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

RELATED ARTICLES

Related Articles

TRENDING ARTICLES