Wednesday, January 22, 2025

ಬನ್ನಿ ಕೊಡುವ ನೆಪದಲ್ಲಿ ಭಾವನನ್ನೆ ಹತ್ತೆಗೈಯ್ದ ಭಾಮೈದರು

ಕಲಬುರಗಿ; ಆತ ತಾನಾಯಿತು ತನ್ನ ಕೆಲಸವಾಯಿತು ಅಂತಾ ಟೆಂಟ್‌ಹೌಸ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ‌‌‌. ಇಬ್ಬರು ಪತ್ನಿ ಹೊಂದಿದ್ದ ಇತ ಮೊದಲನೆಯವಳನ್ನ ಬಿಟ್ಟು ಎರಡನೇ ಪತ್ನಿ ಜೊತೆ ವಾಸ ಮಾಡುತ್ತಿದ್ದ. ಆದರೆ ಎರಡನೇ ಪತ್ನಿ ಸಹೋದರರಿಗೆ ಕೊಟ್ಟ ಹಣ ವಾಪಸ್ ಕೇಳಿದ್ದ. ಇಷ್ಟೇ ನೋಡಿ ನಿನ್ನೆ ದಸರಾ ಹಬ್ಬ ನಿಮ್ಮಿತ್ತ ಭಾವನಿಗೆ ಬನ್ನಿ ಕೊಡುವ ನೆಪದಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

35 ವರ್ಷದ ಲಕ್ಷ್ಮೀಪುತ್ರ ಹತ್ಯೆಗೀಡಾದ ವ್ಯಕ್ತಿ, ಕಲಬುರಗಿ ನಗರದ ಸಂತೋಷ್ ಕಾಲೋನಿಯ ನಿವಾಸಿಯಾಗಿರುವ ಲಕ್ಷ್ಮೀಪುತ್ರ ಇಬ್ಬರು ಪತ್ನಿಯರನ್ನ ಹೊಂದಿದ್ದ. ಮೊದಲನೆಯೇ ಪತ್ನಿ ಶಶಿಕಲಾಳನ್ನ ಬಿಟ್ಟು ಎರಡನೇ ಪತ್ನಿ ಪ್ರೀತಿ ಜೊತೆ ವಾಸವಿದ್ದ ಲಕ್ಷ್ಮೀಪುತ್ರ ಜೀವನೋಪಾಯಕ್ಕಾಗಿ ಸಂತೋಷ್ ಕಾಲೋನಿಯಲ್ಲಿ ಟೆಂಟ್‌ಹೌಸ್ ನಡೆಸಿಕೊಂಡು ಹೋಗುತ್ತಿದ್ದು. ಇದೇ ವೇಳೆ ಎರಡನೇ ಪತ್ನಿ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್‌ನಿಗೆ ಎಂಟು ಲಕ್ಷ ರೂಪಾಯಿ ಹಣವನ್ನ ಸಾಲ ನೀಡಿದ್ದ. ಕೆಲದಿನಗಳ ನಂತರ ಸಾಲ ವಾಪಾಸ್ ಕೇಳಿದ್ದಕ್ಕೆ ಕೊಡ್ತಿನಿ ಕೊಡ್ತಿನಿ ಅಂತಾ ದಿನ ನೂಕುತ್ತಾ ಬಂದಿದ್ದರು.

ಕೆಲ ದಿನದ ನಂತರ ಅಕ್ಟೋಬರ್ 2 ರಂದು ಹಣ ಕೊಡ್ತಿವಿ ಅಂತಾ ಶಿವಕಾಂತ್ ಮತ್ತು ಪ್ರಶಾಂತ್ ಒಪ್ಪಿಕೊಂಡಿದ್ದಾರೆ. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ, ನಿನ್ನೆ ದಸರಾ ಹಬ್ಬದ ನಿಮ್ಮಿತ್ತ ಭಾವನಿಗೆ ಬನ್ನಿ ಕೊಡಲು ಅಂತಾ ಇಬ್ಬರು ಮನೆಗೆ ಬಂದಿದ್ದಾರೆ. ಬನ್ನಿ ಕೊಟ್ಟು ಕಾಲು ಬಿಳುವ ನೆಪದಲ್ಲಿ ತನ್ನೊಟ್ಟಿಗೆ ತಂದಿದ್ದ ಮಾರಕಾಸ್ತ್ರಗಳಿಂದ ಭಾವ ಲಕ್ಷ್ಮೀಪುತ್ರನನ್ನ ಮನಬಂದಂತೆ ಕೊಚ್ಚಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಹೋದರಿ ಪ್ರೀತಿ ಮನೆಯಲ್ಲಿಯೇ ಇದ್ದು, ಆಕೆಯ ಎದುರು ಭಾವನನ್ನ ಕೊಲೆ ಮಾಡಿದ್ದಾರೆ. ಸ್ವಂತದ್ದು ಟೆಂಟ್‌ಹೌಸ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಲಕ್ಷ್ಮೀಪುತ್ರನಿಗೆ ಶಶಿಕಲಾ ಮತ್ತು ಪ್ರೀತಿ ಇಬ್ಬರು ಪತ್ನಿಯರು. ಮೊದಲ ಪತ್ನಿ ಶಶಿಕಲಾಳಿಗೆ ಮೂವರು ಮಕ್ಕಳಿದ್ದು, ಕೆಲವರ್ಷಗಳ ಹಿಂದೆ ಶಶಿಕಲಾನ್ನ ಬಿಟ್ಟು ಪ್ರೀತಿ ಎಂಬಾಕೆ ಜೊತೆ ಮದ್ವೆಯಾಗಿ ಸಂಸಾರ ನಡೆಸುತ್ತಿದ್ದ. ಇದರ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ದಸರಾ ಹಬ್ಬದ ನಿಮ್ಮಿತ್ತ ಮೊದಲ ಪತ್ನಿ ಶಶಿಕಲಾಳ ಮಕ್ಕಳಿಗೆ ಬಟ್ಟೆ ಕೊಡಿಸಲು ಮನೆಗೆ ಬಂದಿದ್ದ. ಟೆಂಟ್‌ಹೌಸ್ ನಡೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದ ಲಕ್ಷ್ಮೀಪುತ್ರ, ಹೆಂಡತಿಯ ಸಹೋದರರಿಗೆ ಹಣಕಾಸಿನ ಅವಶ್ಯಕತೆ ಇದ್ದ ಕಾರಣ ಎಂಟು ಲಕ್ಷ ರೂಪಾಯಿ ಹಣ ನೀಡಿದ್ದನು.

ಆದರೆ ಹಣ ವಾಪಾಸ್ ಕೇಳಿದಾಗ ಕಾಲಹರಣ ಮಾಡಿ ದಿನ ನೂಕುತ್ತಿದ್ದರು. ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದ ಶಿವಕಾಂತ್ ಮತ್ತು ಪ್ರಶಾಂತ್ ಸೇರಿಕೊಂಡು ಭಾವನಿಗೆ ಚಟ್ಟ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ದಸರಾ ಹಬ್ಬದ ನೆಪದಲ್ಲಿ ಬನ್ನಿ ಕೊಡಲು ಮನೆಗೆ ಹೋಗಿ ಅಂದುಕೊಂಡಂತೆ ಭಾವನಿಗೆ ಸಹೋದರಿಯ ಎದುರೆ ಕೊಚ್ಚಿ ಕೊಂದಿದ್ದಾರೆ.

ಅದೆನೇ ಇರಲಿ ದಸರಾ ಹಬ್ಬದ ಸಡಗರ ಸಂಭ್ರಮದಲ್ಲಿದ್ದ ಲಕ್ಷ್ಮೀಪುತ್ರ ತನ್ನ ಭಾಮೈದರಿಂದಲೇ ಭೀಕರವಾಗಿ ಹತ್ಯೆಯಾಗುತ್ತೇನೆಂದು ಊಹಿಸಿರಲಿಲ್ಲ. ಹಣಕಾಸಿನ ವಿಚಾರಕ್ಕೆ ಇಬ್ಬರು ಪತ್ನಿಯರು ವಿಧವೆಯರಾಗಿದ್ದು, ಮಕ್ಕಳು ಅನಾಥರಾಗಿದ್ದು ಮಾತ್ರ ದುರಂತವೇ ಸರಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES