Friday, November 22, 2024

ಗಣಿನಾಡು ಬಳ್ಳಾರಿಯಲ್ಲಿ ಪೊಲೀಸ್ ಮ್ಯೂಸಿಯಂ.!

ಬಳ್ಳಾರಿ: ಐದು ನಿಮಿಷದಲ್ಲಿಯೇ ರಾಜ್ಯದ ಪೊಲೀಸ್ ಇತಿಹಾಸ ಮೆಲುಕು ಹಾಕಬಹುದು. ಸಮವಸ್ತ್ರ, ವಾಕಿಟಾಕಿ, ಪೊಲೀಸ್ ಸಶಸ್ತ್ರದ ಇತಿಹಾಸದ ಹಾದಿ, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯ ಸಮಗ್ರ ಚಿತ್ರಣವನ್ನು ತಿಳಿಯಲು ಈ ಮ್ಯೂಜಿಯಂಗೆ ಒಮ್ಮೆ ಭೇಟಿ ಕೊಟ್ಟರೆ ಒಂದೇ ನೋಟದಲ್ಲಿ ತಿಳಿಯಬಹುದು. ಆಗಾದ್ರೆ ಆ ಮ್ಯೂಸಿಯಂ ಇರೋದಾದ್ರೂ ಎಲ್ಲಿ ಅಂತೀರಾ ಈ ಸ್ಟೋರಿ ಓದಿ.

ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಒಂದು ಮಾದರಿ ಮ್ಯೂಜಿಯಂನ್ನು ಗಣಿ ಜಿಲ್ಲೆಯ ಎಸ್​ಪಿ ಕಚೇರಿಯಲ್ಲಿ ಆರಂಭಿಸಿದ್ದಾರೆ. ಇಲಾಖೆಯ ಇಡೀ ಇತಿಹಾಸವನ್ನು ಒಂದೇ ಸೂರಿನಡಿ ಮತ್ತು ನೋಟದಡಿ ತಿಳಿಸುವುದು ಈ ಮ್ಯೂಜಿಯಂ ಮೂಲ ಉದ್ದೇಶ. ಎಸ್ಪಿ ಕಚೇರಿಯಲ್ಲಿರುವ 100 ವರ್ಷದ ಹಳೆಯ ಕಟ್ಟಡವನ್ನು ನವೀಕರಣ ಮಾಡಿ, 45 ಲಕ್ಷ ರೂ ವೆಚ್ಚದಲ್ಲಿಯೇ ಮ್ಯೂಜಿಯಂ ವ್ಯವಸ್ಥೆ ಮಾಡಿದ್ದಾರೆ.
1838ರಲ್ಲಿ ಪೊಲೀಸರು ನಿರ್ವಹಿಸಬೇಕಾದ ಕೆಲಸವನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಆಮರಗರರು, ಅಂಕಮಾಲೆ, ಪಾಟೀಲ್, ಶಾನುಭೋಗ ಮುಂದಾದವರು ನಿರ್ವಹಿಸಿದರು. ನಂತರ ಪೊಲೀಸ್ ವ್ಯವಸ್ಥೆ ಸುಧಾರಣೆಯಾಗಿ 1847ರಲ್ಲಿ ಹೈದ್ರಾಬಾದ್ ಪೊಲೀಸ್ ವ್ಯವಸ್ಥೆ, 1857ರಲ್ಲಿ ಮದ್ರಾಸ್ ಪೊಲೀಸ್ ವ್ಯವಸ್ಥೆ, 1883ರಲ್ಲಿ ಮೈಸೂರು ಪೊಲೀಸ್ ವ್ಯವಸ್ಥೆ, ಬಾಂಬೆ ಪೊಲೀಸ್ ವ್ಯವಸ್ಥೆ ಕೊಡಗು ಪೊಲೀಸ್ ವ್ಯವಸ್ಥೆ ಜಾರಿಗೆ ಬಂತು.

1885ರಲ್ಲಿ ನವಂಬರ್ 1ರಂದು ಎಲ್ ರಿಕೆಟ್ಸ್ ಮೊದಲ ಹಳೆ ಮೈಸೂರ ರಾಜ್ಯಕ್ಕೆ ಐಜಿಪಿಯಾಗಿ ನೇಮಕರಾದರು. ಇವರೇ ಮಳೆ ಮೈಸೂರಿನ ಪ್ರಥಮ ಐಜಿಪಿ. ನ.1, 1956ರಲ್ಲಿ ಹೊಸ ಮೈಸೂರು ರಾಜ್ಯವು ರೂಪುಗೊಂಡಿತ್ತು, ಪಿ.ಕೆ. ಪೊನ್ನಪ್ಪ ಐಪಿಎಸ್ ಪೊಲೀಸ್ ಮಹಾನಿರೀಕ್ಷಕರಾಗಿ ಹೊಸ ಮೈಸೂರಿನ ರಾಜ್ಯದ ಪೊಲೀಸ್ ಆಡಳಿತ ನೇತೃತ್ವವಹಿಸಿದ್ದರು. ಈ ಮಾಹಿತಿಯು ಮ್ಯೂಜಿಯಂನಲ್ಲಿ ಲಭ್ಯವಿರಲಿದೆ.

ಮದ್ರಾಸ್ ಪ್ರಾಂತ್ಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಲು 10ನೇ ತರಗತಿ ಅಥವಾ ಮಧ್ಯಂತರದ ಅರ್ಹತೆ ಅಗತ್ಯವಾಗಿತ್ತು. ಇಂಪೀರಿಯಲ್ ಪೊಲೀಸ್ ಖೇಡರ್ಗೆ ಲಂಡನ್ನಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದರು. ನಂತರ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಪೋಸ್ಟ್ ಮಾಡಲಾಗುತ್ತಿತ್ತು. ಹತ್ತು ವರ್ಷಗಳಲ್ಲಿ ಅವರಿಗೆ ಬಡ್ತಿ ನೀಡಿ ಪೊಲೀಸ್ ಅಧೀಕ್ಷಕರನ್ನಾಗಿ ಮಾಡಲಾಯಿತು. ನಂತರದಲ್ಲಿ ಈ ಹುದ್ದೆಗಳನ್ನು ನೇರವಾಗಿ ಐಪಿಎಸ್ಗಳನ್ನು ನೇಮಕ ಮಾಡಲಾಯಿತು ಎಂಬ ಮಾಹಿತಿ ಇಲ್ಲಿದೆ.

ಇಂದಿನ ಆಂಧ್ರಪ್ರದೇಶದ ಅನಂತಪುರ, ಆದೋನಿ, ಆಲೂರು, ಗುತ್ತಿ, ರಾಯದುರ್ಗ, ತಾಡಿಪತ್ರಿ, ಧರ್ಮವರಂ, ಪೆನ್ನಕೊಂಡ, ಹಿಂದೂಪುರ, ಮಡಕಸಿರಗಳು 1860ರಲ್ಲಿ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳ ಪಟ್ಟಿತ್ತು. ಇಲ್ಲಿನ ಠಾಣೆಗಳು ಸೇರಿದಂತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ 14 ತಾಲೂಕುಗಳ ಇತ್ತೆಂಬ ಮಾಹಿತಿ ಇಲ್ಲಿದೆ. ದೂರದ ವಸ್ತುಗಳನ್ನು ನೋಡಲು ಅನುಮಾನಾಸ್ಪದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು, ಕಾನೂನು ಪಾಲನೆಗೆ ಬೈನಾಕೂಲರಗಳು ಹೆಚ್ಚು ಉಪಯುಕ್ತ. ಬೈನಾಕೂಲರನ್ನು ಕ್ರಿ.ಶ.1608ರಲ್ಲಿ ಹ್ಯಾನ್ಸ್ ಲಿಪ್ಪರ್ಶ ಎಂಬ ಡಚ್ ಸಂಶೋಧಕ ಇದನ್ನು ಕಂಡು ಹಿಡಿದಿದ್ದ ಹೀಗೆ ಇದರ ಸಮಗ್ರ ಮಾಹಿತಿ ಒಳಗೊಂಡಿದೆ.

1956ರಲ್ಲಿ ರಾಜ್ಯಗಳು ಮರು ವಿಂಗಡೆಯ ನಂತಗರ ಪೊಲೀಸ್ ವ್ಯವಸ್ಥೆಗೆ ಹಲವು ಸವಾಲು ಒಡ್ಡಿತ್ತು, ಅದರಲ್ಲಿ ಸಮವಸ್ತ್ರವು ಒಂದಾಗಿತ್ತು, ವಿವಿಧ ಪೊಲೀಸ್ ಘಟಕಗಳು ಬಹು ಸಮವಸ್ತ್ರ ಹೊಂದಿತ್ತು. 1973ರಲ್ಲಿ ಸಮವಸ್ತ್ರವನ್ನು ಅಂಗೀಕರಿಸಿತು. ಆದರೆ ಕೆಲವೊಂದು ತೊಡಕಿನಿಂದಾಗಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಮುತುವರ್ಜಿವಹಿಸಿ ಪೊಲೀಸರಿಗೆ ಆರಾಮದಾಯಕ ಮತ್ತು ಆಕರ್ಷಕ ಸಮವಸ್ತ್ರವನ್ನು ಅನುಮೋದಿಸಿದರು.

ಆರಂಭದಲ್ಲಿ ಶಟ್ಸ್ಗಳು ಪ್ಯಾಂಟ್ ಗಳಾಗಿ ಬದಲಾವಣೆ, ಸಿವಿಎಲ್ ಪಿಸಿ ಮತ್ತು ಎಚ್ಸಿ ಕುರ್ತಾಗಳನ್ನು ಫುಲ್ ಶರ್ಟ್​​ಗಳಾಗಿ ಬದಲಾವಣೆ, 1973ರಲ್ಲಿ ಮಹಿಳಾ ಪೊಲೀಸ್ ಪೇದೆ ಯೂನಿಫಾರ್ಮ್, ಮಹಿಳೆಯರಿಗೆ ನೀಲಿ ಕಲೆಯ ರೇಷ್ಮೆ ಸೀರೆಗಳ ಜಾಗದಲ್ಲಿ, ಬಿಳಿ ಬಣ್ಣದ ಕೋಟ್​ಗಳು ಮತ್ತು ಟೆರಿಕಾಟ್ ಸೀರೆಗಳನ್ನು ಒದಗಿಸುತ್ತಿದ್ದರೆಂಬ ಮಾಹಿತಿಯನ್ನು ಇಲ್ಲಿ ಕಾಣಬಹುದು.

ಇನ್ನೂ ಹಳೆಯ 38 ರೇಗರ್ ರಿವಾಲ್ವರ್, .455 ರಿವಾಲ್ವರ್, .303 ನಂ.1 ಮಾರ್ಕ್ 3 ರೈಫಲ್, .303 ನಂ.4 ಮಾರ್ಕ್ 1 ರೈಫಲ್, ನಂ.5 ಮಾರ್ಕ್ 1 ರೈಫಲ್, 38 ರಿವಾಲ್ವರ್ ಮಿನಿ, 410 ಮಸ್ಕಿಟ್, 45 ಸಿಎಂಟಿ ಹೀಗೆ ಸುಮಾರು ಒಂದುವರೆ ಎರಡು ಶತಕದ ಸಶಸ್ತ್ರಗಳ ಪ್ರದರ್ಶನವನ್ನು ಮಾಡಲಾಗಿದೆ.

ಮಾಬ್ ಆಪರೇಷನ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಬಾಡಿ ಪ್ರೊಟೆಕ್ಟರ್ ದೇಹದ ರಕ್ಷಾ ಕವಚವನ್ನು ಬಳಕೆ ಮಾಡುತ್ತಿದ್ದರು. ಇದನ್ನು ಕ್ರಿ.ಶ.1400ರಲ್ಲಿ ಗ್ರೀಕ್ ಮೈಸಿನಿಯನ್ ರಾಜನು ಮೊದಲು ಬಳಸಿದನು. ಲೆಗ್ ಪ್ಯಾಡ್ ಪ್ರೊಟೆಕ್ಟರ್, ಹ್ಯಾಂಡ್ ಪ್ರೊಟೆಕ್ಟರ್, ಹೆಲ್ಮೆಟ್ ಬಳಕೆ ಮಾಡುತ್ತಾರೆ. ಕೈಕೋಳ ಮತ್ತು ಲೀಡಿಂಗ್ ಚೈನ್ಗಳ ಪ್ರದರ್ಶನ ಮಾಡಲಾಗಿದೆ. ಅಂದು ವಾಕಿಟಾಕಿ ಕೆಲಸ ಮಾಡುವ ವೈರಯ್ಲೆಸ್ ಮಿಷನನ್ನು ಸಿಬ್ಬಂದಿಯೇ ಕೈಯಲ್ಲಿ ಹಿಡಿದು ಕೊಂಡು ಹೋಗುತ್ತಿದ್ದರು.

RELATED ARTICLES

Related Articles

TRENDING ARTICLES