ಮೈಸೂರು: ಇಂದು ನಾಡಿನಾದ್ಯಂತ ದಸಾರ ಸಂಭ್ರಮ ಹಿನ್ನಲೆಯಲ್ಲಿ ಮೈಸೂರು ವಿಜಯದಶಮಿ ಜಂಬೂಸವಾರಿಗೆ ಇಂದು ಅಧಿಕೃತವಾಗಿ ಯದುವೀರ್ ಮೆರವಣಿಗೆ ಚಾಲನೆ ನೀಡಲಿದ್ದಾರೆ.
ದಸರಾ ಪ್ರಯುಕ್ತವಾಗಿ ಮೈಸೂರಿನ ಅರಮನೆಯಂಗಳದಲ್ಲಿ ಮೂವತ್ತು ಸಾವಿರ ಆಸನಗಳ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಸಿಎಂ, ರಾಜವಂಶಸ್ಥರು, ಗಣ್ಯರು ಸೇರಿದಂತೆ ಜನರಿಗೆ 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅರಮನೆಯಂಗಳದಲ್ಲಿ ನಡೆಯುವ ಜಂಬೂಸವಾರಿ ಮೆರವಣಿಗೆ ಇಂದು ಮಧ್ಯಾಹ್ನ 2 ಗಂಟೆಯಿಂದು 3 ಗಂಟೆ ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿದ್ವಜ ಪೂಜೆ.
ಅರಮನೆ ಬಲರಾಮ ದ್ವಾರದ ಬಳಿ ನಡೆಯುವ ಪೂಜೆ ನಡೆಯಲಿದೆ.
ಇಂದು ಸಂಜೆ 5 ರಿಂದ 5.18 ಗಂಟೆ ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಅರಮನೆಯಂಗಳದಲ್ಲಿ ಅಂಬಾರಿಗೆ ಯದುವೀರ್ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ಸಿಎಂ ಬೊಮ್ಮಯಿ, ಯಧುವೀರ್, ಜಿಲ್ಲಾಧಿಕಾರಿ, ಮಹಾಪೌರರು, ಜಿಲ್ಲಾ ಉಸ್ತುವಾರಿ ಸಚಿವರು ಅಂಬಾರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಇನ್ನು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ, ರಾಷ್ಟ್ರಗೀತೆ ನುಡಿಸುವ ವೇಳೆ 21ಕುಶಾಲತೋಪು ಸಿಡಿಯುವ ಕಾರ್ಯ, ನಂದಿ ಪೂಜೆ ಬಳಿಕ 47 ಸ್ತಬ್ಧ ಚಿತ್ರಗಳು, ಜನಪದ ಕಲಾತಂಡಗಳ ಮೆರವಣಿಗೆಗೆ, ಪ್ರತಿ ಜಿಲ್ಲೆಯ ಒಂದು ಸ್ತಬ್ದಚಿತ್ರ, ಬೇರೆ ಮಾದರಿಯ ಸ್ತಬ್ದಚಿತ್ರಗಳು ಚಾಲನೆ ನೀಡಲಿದ್ದಾರೆ.
ಇನ್ನು ಈ ವೇಳೆ ವಿವಿಧ ಉಪಸಮಿತಿಯಿಂದ 3, ಮೈಸೂರು ವಿವಿ 1, ಚೆಸ್ಕಾಂ 1, ಸಮಾಜ ಕಲ್ಯಾಣ ಇಲಾಖೆ 1, ಪ್ರವಾಸೋದ್ಯಮ ಇಲಾಖೆ 1, ಲಿಡಕರ್ 1, ಕೌಶಲ್ಯ ಕರ್ನಾಟಕ 1, ಕೆಎಂಎಫ್ 1, ಕಾವೇರಿ ನೀರಾವರಿ ನಿಗಮದ ಒಂದು ಸ್ತಬ್ಧಚಿತ್ರ, ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರ ಸೇರಿ ಹಲವು ಸ್ತಬ್ದಚಿತ್ರಗಳು ಪ್ರದರ್ಶನವಾಗಲಿವೆ.