Wednesday, January 22, 2025

ಕಂದಕಕ್ಕೆ ಬಸ್​​ ಬಿದ್ದು 25 ಸಾವು, 21 ಮಂದಿ ರಕ್ಷಣೆ.!

ಉತ್ತರಾಖಂಡ: 45 ರಿಂದ 50 ಜನರಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ರಸ್ತೆಯ ಪಕ್ಕವಿದ್ದ​ ತೆಗ್ಗು ಪ್ರದೇಶಕ್ಕೆ ಬಿದ್ದ ಪರಿಣಾಮವಾಗಿ 25 ಮಂದಿ ಸಾವನ್ನಪ್ಪಿದ ಘಟನೆ ಉತ್ತರಾಖಂಡದ ಪೌರಿ ಗರ್ವಾಲ್‌ನಲ್ಲಿ ನಡೆದಿದೆ.

ಸಿಮ್ಡಿ ಗ್ರಾಮದ ಬಳಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಲಾಲ್‌ಧಾಂಗ್‌ನಿಂದ ಬಸ್‌ನಲ್ಲಿ ಮದುವೆ ಕಾರ್ಯಕ್ರಮಕ್ಕೆ 40 ರಿಂದ 50 ಜನರು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ನಿನ್ನೆ ರಾತ್ರಿ ನಡೆದ ಪೌರಿ ಗರ್ವಾಲ್ ಬಸ್ ಅಪಘಾತದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ರಾತ್ರೋರಾತ್ರಿ 21 ಜನರನ್ನು ರಕ್ಷಿಸಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಇನ್ನು ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ಬಗ್ಗೆ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ಅಪಘಾತದ ಸ್ಥಳಕ್ಕೆ ಈಗಾಗಲೇ ಕಳುಹಿಸಿದ್ದು, ಅಪಘಾತದ ಸ್ಥಳಕ್ಕೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಜನರನ್ನ ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES