Sunday, December 8, 2024

ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ ಎಂದು ಪಿಎಫ್​ಐ ಪರವಾಗಿ ಬರಹ ಪತ್ತೆ.!

ಮಂಗಳೂರು: ಚಡ್ಡಿಗಳೇ ಎಚ್ಚರದಿಂದ ಇರಿ ಪಿಎಫ್ಐ ಸಂಘಟನೆಯನ್ನ ನಾವು ಮರಳಿ ಬರುತ್ತೇವೆ ಅಂತ ರಸ್ತೆಯಲ್ಲಿ ಬರೆದಿರುವ ಬರಹ ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ಕಂಡುಬಂದಿದೆ.

ಚಡ್ಡಿಗಳೇ ಎಚ್ಚರವಾಗಿ ಇರಿ, ಪಿಎಫ್ಐ, ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಪಿಎಪ್​ಐ ಸಂಘಟನೆ ಪರ ಬರೆದಿದ್ದಾರೆ. ಸದ್ಯ ಸ್ಥಳಕ್ಕೆ ಹಿಂದು ಸಂಘಟನೆ ಕಾರ್ಯಕರ್ತರು, ಪುಂಜಾಲಕಟ್ಟೆ ಪೊಲೀಸರ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಇತ್ತೀಚೆಗೆ ನಿಷೇಧ ಆಗಿರುವ ಪಿಎಫ್ಐ ಸಹವರ್ತಿ ಸಂಘಟನೆ ಕಾರ್ಯಕರ್ತರು ಬರೆದಿದ್ದಾರೆ ಎಂದು ಶಂಕಿಸಲಾಗಿದೆ.

ದೇಶಾದ್ಯಂತ ಪಿಎಫ್‌ಐ ಸಂಘಟನೆ ಮೇಲೆ ಮೊದಲು ದಾಳಿ ನಡೆಸಿದ ನಂತರ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆ ಬ್ಯಾನ್‌ ಮಾಡಿತ್ತು. ಅಲ್ಲದೇ, ಪಿಎಫ್​ಐ ಅವರ ಅಂಗಸಂಸ್ಥೆಗಳನ್ನು 5 ವರ್ಷಗಳ ಕಾಲ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು.

RELATED ARTICLES

Related Articles

TRENDING ARTICLES