Saturday, November 2, 2024

ನಾಳೆ ಜಂಬೂಸವಾರಿ; ಅರಮನೆ ಆವರಣದಲ್ಲಿ ಗರಿಗೆದರಿದ ಅಂಬಾರಿ ಸಿದ್ಧತೆ.!

ಮೈಸೂರು: ಅರಮನೆನಗರಿಯ ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಆಯುಧ ಪೂಜೆ ನಾಳೆ ವಿಜಯದಶಮಿ ಹಿನ್ನೆಲೆ, ವಿಶ್ವ ವಿಖ್ಯಾತ ಅಂಬಾರಿ ದಿನಕ್ಕಾಗಿ ಸಂಸ್ಕೃತಿಕ ನಗರಿ ಸಜ್ಜಾಗಿದೆ.

ಇಂದು ಆಯುಧ ಪೂಜೆ ಸಡಗರ ಮುಗಿದರೆ, ನಾಳೆ ವಿಜಯದಶಮಿ ಸಂಭ್ರಮ. ಕಳೆದ ಎರಡು ವರ್ಷದಿಂದ ಅಂಬಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಈ ಬಾರಿ ಪ್ರತಿ ವರ್ಷದಂತೆ ಎಲ್ಲಾ ಸಾಂಪ್ರದಾಯಗಳನ್ನ ಅದ್ದೂರಿಯಾಗಿ ಪಾಲನೆ ಮಾಡಲಾಗುತ್ತದೆ.

ನಿನ್ನೆ ಅರಮನೆಯಲ್ಲಿ ಅರಮನೆ ಅಂಬಾರಿ ಆನೆಗಳಿಗೆ ಪುಷ್ಪಾರ್ಚನೆ ಪೂರ್ವಾಭ್ಯಾಸ ನಡೆಸಲಾಯಿತು. ಕಳೆದ ಮೂರು ದಿನಗಳಿಂದ ತಾಲೀಮು ನಡೆಸಲಾಗಿದೆ. ರಾಷ್ಟ್ರೀಯ ವಂದನ ಶಾಸ್ತ್ರ ನ್ಯಾಷನಲ್ ಸೆಲ್ಯೂಟ್ ಪೆರೇಡ್ ಮಾಡಲಾಗುತ್ತದೆ. ನಂತ್ರ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಕೆಎಸ್​ಆರ್​​ಪಿ, ಹೋಮ್ ಗಾರ್ಡ್ , ಆರ್​ಪಿಏಫ್, ಡಿ‌ಆರ್, ಸಿ‌ಎಆರ್, ಅಶ್ವರೋಹಿದಳದವ್ರಿಂದ ಅಂತಿಮ ಹಂತದ ತಾಲೀಮು ನಡೆಯುತ್ತಿದೆ.

ಈ ಬಾರಿ 14 ಆನೆಗಳಲ್ಲಿ 9 ಆನೆಗಳು ಆಯ್ಕೆ ಆಗಿವೆ. ಅರ್ಜುನ ಈಗಾಗಲೇ ಅಂಬಾರಿ ಹೊತ್ತಿರುವ ಕಾರಣ ಅವ್ನಿಗೆ ಗೌರವ ನೀಡಲು ನಿಶಾನೆ ಆನೆಯನ್ನಾಗಿ ಮಾಡಿಲಾಗಿದೆ ಅಂತ ಡಿಸಿಏಫ್ ಕರಿಕಾಲನ್ ತಿಳಿಸಿದರು.

ಇನ್ನು ನಾಳೆ ಜಂಬೂಸವಾರಿ ಹಿನ್ನಲೆಯಲ್ಲಿಯಲ್ಲಿ ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಗೆ ಪೆಂಡಲ್ ಹಾಗೂ ಕುರ್ಚಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಗೋಲ್ಡ್ ಪಾಸ್ ಹೊಂದಿರುವವರಿಗೆ ಹಾಗೂ ವಿವಿಐಪಿಗಳಿಗೆ ವಿಶೇಷ ಆಸನದ ವ್ಯವಸ್ಥೆ ಇರಲಿದೆ. 5000 ಕೊಟ್ಟು ಗೋಲ್ಡ್ ಪಾಸ್ ಪಡೆದವರಿಗೆ ಮಾತ್ರ ಅರಮನೆ ಆವರಣದಲ್ಲಿ ಅಂಬಾರಿ ವೀಕ್ಷಿಸಬಹುದಾಗಿದೆ. ಇನ್ನು ವಿಜಯದಶಮಿ ದಿನದ ಬೆಳಗ್ಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬೆಳ್ಳಿರಥದಲ್ಲಿ ಕಳುಹಿಸಲಾಗುತ್ತದೆ. ಬೆಳಗ್ಗೆ ದೇವಿಗೆ ವಿಶೇಷ ಅಭಿಷೇಕ ಹಾಗೂ ಪ್ರಾರ್ಥನೆಯನ್ನು ಮಾಡಿ ಅರಮನೆಗೆ ಕಳುಹಿಸಲಾಗುತ್ತದೆ ಎಂದು ಪ್ರಧಾನ ದೀಕ್ಷಿತರು ತಿಳಿಸಿದರು.

ಜಂಬೂ ಸವಾರಿ ವೀಕ್ಷಣೆಗೆ ಸಕಲ ಸಿದ್ಧತೆ ಹಾಗೂ ಭದ್ರತೆಯನ್ನು ಇವತ್ತಿನಿಂದಲೇ ಶುರು ಮಾಡಲಾಗಿದೆ. ಇತ್ತ ಪ್ರವಾಸಿಗರ ಸಂಖ್ಯೆಯೂ ಕೂಡ ಮೈಸೂರಿನಲ್ಲಿ ಹೆಚ್ಚಾಗಿದೆ.

ಸ್ವಾತಿ ಫುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

RELATED ARTICLES

Related Articles

TRENDING ARTICLES