Wednesday, January 22, 2025

ರಾಜ್ಯ ಸರ್ಕಾರ ಅಳಿವು ಉಳಿವು ಬಗ್ಗೆ ಕೋಡಿ ಶ್ರೀ ಭವಿಷ್ಯ.!

ಧಾರವಾಡ; ಮಳೆ, ರೋಗದಿಂದ ಭೂಮಿಯಿಂದ ದೇಶಕ್ಕೆ ತೊಂದರೆಯಾಗುತ್ತದೆ. ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಇದು ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಪ್ರಾರಂಭದಲ್ಲೇ ನಾನು ಹೇಳಿದಂತೆ ಮಳೆ, ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳಾಗುತ್ತವೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ಕೊರೊನಾ ರೋಗ ಹೆಚ್ಚಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ ಎಂದು ಹೇಳಿದ್ದೆ ಇದೆಲ್ಲಾ ನಿಜವಾಗಿದೆ.

ಒಂದೆಡೆ ಪ್ರಕೃತಿ ವಿಕೋಪ, ಮತಾಂದತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ  ಕದಡುವ ಕೆಲಸ ಆಗುತ್ತದೆ. ಈಗ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆ ಕಾಲದಲ್ಲಿ ಈ ಬಗ್ಗೆ ಹೇಳುತ್ತೇನೆ. ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ.

ಭವಿಷ್ಯದಲ್ಲಿ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ. ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ. ಆದರೆ ಈ ಕೊರೊನಾ ಮೊದಲು ಬಂದಿದ್ದೇ ದೇವರ ಮೇಲೆ, ಮೊದಲು ಮಠ, ಮಾನ್ಯಗಳ ಮೇಲೆ ಬಂತು ಆ ಮೇಲೆ ಮನುಷ್ಯರ ಮೇಲೆ ಬಂದಿದೆ. ಜನೆವರಿವರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ
ಇದು ಮತ್ತೊಂದು ರೂಪವಾಗುವ ಲಕ್ಷಣವೂ ಇದೆ ಎಂದು ಕೋಡಿ ಶ್ರೀ ಹೇಳಿದರು.

ರಾಜ್ಯ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಅದಕ್ಕೇಕೆ ನಾನು ಅಪಶಕುನ ನುಡಿಯುವುದು ಬೇಡ. ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಹೇಳುತ್ತೇನೆ. ಅದನ್ನು ಯುಗಾದಿ ಫಲದ ಮೇಲೆ ಹೇಳುತ್ತೇನೆ. ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಇದು ಶುಭ ಆಗೋದಿಲ್ಲ. ಅಶುಭವಾಗುತ್ತದೆ. ಮನುಷ್ಯನಿಗೆ ಪ್ರಕೃತಿ, ಮಳೆಯಿಂದ ಸಮಸ್ಯೆಗಳಾಗುತ್ತವೆ. ಗುಡ್ಡಗಳು ಕುಸಿತ. ಭೂಕಂಪ ಹೆಚ್ಚಾಗೋ ಲಕ್ಷಣ ಇದೆ.

ಮುಂದಿನ ದಿನಗಳಲ್ಲಿ ಜನರು ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು. ಅದು ಸಂರಕ್ಷಣೆಯಾಗುತ್ತದೆ. ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ. ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಎಂದು ಸ್ವಾಮೀಜಿ ತಿಳಿಸಿದರು.

RELATED ARTICLES

Related Articles

TRENDING ARTICLES