Tuesday, November 5, 2024

ದುಬೈನಲ್ಲಿ ಭಕ್ತರ ದರ್ಶನಕ್ಕೆ ರೆಡಿಯಾದ ಹಿಂದೂ ದೇವಾಲಯ.!

ದುಬೈ: ದುಬೈನ ಜೆಬೆಲ್ ಅಲಿಯಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ದೇವಾಲಯವು ದಸರಾ ಹಬ್ಬಕ್ಕೂ ಒಂದು ದಿನ ಮೊದಲೇ ಬಾಗಿಲು ತೆರೆಯಲಿದೆ ಎಂದು ವರದಿಗಳು ತಿಳಿಸಿವೆ.

ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯವಾಗಿದೆ ಎಂದು ಎಎನ್​ಐ ವರದಿ ಮಾಡಿದೆ. ಫೆಬ್ರವರಿ 2020 ಈ ದೇವಾಲಯ ಹೊಸದಾಗಿ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿತ್ತು. ಈಗ ದಶಕಗಳ ಭಾರತೀಯ ಹಿಂದೂಗಳು ಕನಸನ್ನು ನನಸಾಗುತ್ತಿದೆ.

ಅಕ್ಟೋಬರ್ 5 ದಸರಾ ಹಬ್ಬದ ದಿನ ಸಾರ್ವಜನಿಕರಿಗೆ ಅಧಿಕೃತವಾಗಿ ದೇವಾಲಯ ತೆರೆಯಲಿದೆ. ಈ ಹಿಂದೂಗಳಿಗೆ ಮಾತ್ರವಲ್ಲದೇ ಎಲ್ಲಾ ಎಲ್ಲಾ ಧರ್ಮದ ಜನರನ್ನು ಸ್ವಾಗತಿಸುತ್ತದೆ. 16 ದೇವತೆಗಳು ಮತ್ತು ಇತರ ಒಳಾಂಗಣ ಕೆಲಸಗಳನ್ನು ವೀಕ್ಷಿಸಲು ಆರಾಧಕರು ಮತ್ತು ಇತರ ಸಂದರ್ಶಕರಿಗೆ ಪ್ರವೇಶವನ್ನು ಅನುಮತಿಸಿದೆ ಎಂದು ಅಲ್ಲಿನ ಗಲ್ಫ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

RELATED ARTICLES

Related Articles

TRENDING ARTICLES