Sunday, December 22, 2024

ಡಬಲ್ ಬ್ಯೂಟೀಸ್ ಜೊತೆ ಡಾರ್ಲಿಂಗ್ ದಿಲ್​ಪಸಂದ್ ಆಟ

ಲವ್ ಮಾಕ್ಟೇಲ್​ನಿಂದ ಗೆಲುವಿನ ಓಟ ಮುಂದುವರೆಸಿರೋ ಡಾರ್ಲಿಂಗ್ ಕೃಷ್ಣ, ಸದ್ಯ ದಿಲ್​ಪಸಂದ್ ಉಣಬಡಿಸೋಕೆ ಸಜ್ಜಾಗಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ಹಿಟ್​ನ ನಿರೀಕ್ಷೆಯಲ್ಲಿದ್ದಾರೆ. ಇಷ್ಟಕ್ಕೂ ದಿಲ್​ಪಸಂದ್​ನ ಟೇಸ್ಟ್ ಹೆಚ್ಚಿಸಿರೋ ಬೊಂಬಾಟ್ ಬೆಡಗಿಯರು ಯಾರು..? ಅದ್ರ ಕಲರ್​ಫುಲ್ ಝಲಕ್ ಹೇಗಿದೆ ಅನ್ನೋದ್ರ ರಿಪೋರ್ಟ್​ ನಿಮಗಾಗಿ.

  • ಹ್ಯಾಟ್ರಿಕ್ ಹಿಟ್​ನತ್ತ ಮಾಕ್ಟೇಲ್ ಕ್ಯಾಪ್ಟನ್ ಕೃಷ್ಣನ ನಾಗಾಲೋಟ
  • ಪಕ್ಕಾ ಯೂತ್​ಫುಲ್ ಎಂಟರ್​ಟೈನರ್​ನಲ್ಲಿ ಸಂತು & ಐಶು
  • ರಂಗಾಯಣ ರಘು, ತಬಲಾ ನಾಣಿ ಕಾಮಿಡಿ ಟ್ರ್ಯಾಕ್ ಮಸ್ತ್

ಯೆಸ್.. ಕಾಲೇಜ್ ಹುಡ್ಗಿಯರ ಕ್ರಶ್ ಡಾರ್ಲಿಂಗ್ ಕೃಷ್ಣಗೆ ಗುಡ್ ಟೈಂ ಬಂದಾಯ್ತು. ಯಾವಾಗ ಲವ್ ಮಾಕ್ಟೇಲ್ ಸಿನಿಮಾನ ಅವ್ರೇ ನಿರ್ದೇಶಿಸಿ, ನಟಿಸಿ, ನಿರ್ಮಿಸಿದ್ರೋ ಆಗ್ಲೇ ಸಕ್ಸಸ್ ಟ್ರ್ಯಾಕ್​ಗೆ ಬಂದಾಯ್ತು. ಅದಾದ ಬಳಿಕ ರೆಮ್ಯುನರೇಷನ್ ಜೊತೆ ಆಫರ್​ಗಳೂ ಹೆಚ್ಚಾದವು. ಅವ್ರೇ ಮಾಡಿದ ಲವ್ ಮಾಕ್ಟೇಲ್ ಸೀಕ್ವೆಲ್ ಕೂಡ ಬಾಕ್ಸ್ ಅಫೀಸ್ ಬ್ಯಾಂಗ್ ಮಾಡಿತು.

ನಂತ್ರ ರೀಸೆಂಟ್ ಆಗಿ ತೆರೆಕಂಡ ಲಕ್ಕಿಮ್ಯಾನ್ ನಿರೀಕ್ಷೆಗೂ ಮೀರಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಪರಮಾತ್ಮನ ಜೊತೆ ಕೃಷ್ಣನ ಜರ್ನಿಯ ಆ ಸಿನಿಮಾ ಅವ್ರ ಕರಿಯರ್​ನ ಬೆಸ್ಟ್ ಸಿನಿಮಾ ಆಗಿ ಉಳಿದುಕೊಳ್ತು. ಇದೀಗ ಮುಂದಿನ ಸಿನಿಮಾ ದಿಲ್​ಪಸಂದ್ ಮೂಲಕ ಹ್ಯಾಟ್ರಿಕ್ ಹಿಟ್​ನ ನಿರೀಕ್ಷೆಯಲ್ಲಿದ್ದಾರೆ ಡಾರ್ಲಿಂಗ್.

ದಸರಾ ವಿಶೇಷ ದಿಲ್​ಪಸಂದ್ ಟೀಸರ್ ಲಾಂಚ್ ಆಗಿದ್ದು, ಟೈಟಲ್​ನಂತೆ ಕಥೆ ಕೂಡ ಇಂಪ್ರೆಸ್ಸೀವ್ ಅನಿಸಿದೆ. ಔಟ್ ಅಂಡ್ ಔಟ್ ಯೂತ್​ಫುಲ್ ಎಂಟರ್​ಟೈನರ್ ಆಗಿರೋ ದಿಲ್​ಪಸಂದ್, ಹೆಂಗೆಳೆಯರ ಹಾರ್ಟ್​ಗೆ ಬಾಣ ಬಿಟ್ಟಿದೆ. ಈಗಿನ ಟ್ರೆಂಡ್​ಗೆ ತಕ್ಕನಾಗಿ ಸಿನಿಮಾ ಇರಲಿದ್ದು, ಹದಿಹರೆಯದ ಮನಸ್ಸುಗಳ ಲವ್, ರೊಮ್ಯಾನ್ಸ್, ಫ್ರೆಂಡ್​ಶಿಪ್ ಹಾಗೂ ಅಚಾತುರ್ಯಗಳನ್ನ ತೋರುವಂತಹ ಕಥೆಯಾಗಿದೆ.

ಇಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರಿಬ್ಬರು ನಟೀಮಣಿಯರಿದ್ದು, ಒಂದ್ಕಡೆ ನಿಶ್ವಿಕಾ ನಾಯ್ಡು ಮತ್ತೊಂದ್ಕಡೆ ಮೇಘಾ ಶೆಟ್ಟಿ ಸಿನಿಮಾದ ಗ್ಲಾಮರ್ ಹೆಚ್ಚಿಸಲಿದ್ದಾರೆ. ಲವ್ ಮಾಕ್ಟೇಲ್ ಕೂಡ ಯೂತ್ಸ್​ಗೆ ಬೇಗ ಕನೆಕ್ಟ್ ಆಗಿತ್ತು. ಅದ್ರಂತೆ ಶಿವತೇಜಸ್ ನಿರ್ದೇಶನದ ದಿಲ್​ಪಸಂದ್ ಪ್ರೇಕ್ಷಕರಿಗೆ ಮಸ್ತ್ ಟೇಸ್ಟ್ ಕೊಡೋ ಲಕ್ಷಣಗಳನ್ನು ತೋರಿದೆ.

ನಿರ್ದೇಶಕ ಸುಮಂತ್ ಕ್ರಾಂತಿ ನಿರ್ಮಾಣದ ದಿಲ್​ಪಸಂದ್, ನವೆಂಬರ್​ನಲ್ಲಿ ತೆರೆಗೆ ಬರ್ತಿದ್ದು, ಕೃಷ್ಣ- ನಿಶ್ವಿಕಾ- ಮೇಘಗೆ ಹಿರಿಯ ಕಲಾವಿದರು ಕೂಡ ಸಾಥ್ ನೀಡಿದ್ದಾರೆ. ರಂಗಾಯಣ ರಘು ಹಾಗೂ ತಬಲಾ ನಾಣಿ ಕಾಮಿಡಿ ಟ್ರ್ಯಾಕ್ ಚಿತ್ರಕ್ಕೆ ಪ್ಲಸ್ ಆಗಲಿದ್ದು, ರೀಸೆಂಟ್ ಆಗಿ ಟೀಸರ್ ಲಾಂಚ್ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೀತು.

ಒಟ್ಟಾರೆ ಡಾರ್ಲಿಂಗ್ ಕೃಷ್ಣ- ನಿಶ್ವಿಕಾ ಜೋಡಿಯ ದಿಲ್​ಪಸಂದ್ ಮ್ಯಾಜಿಕ್ ಮಾಡೋ ಮನ್ಸೂಚನೆ ನೀಡಿದೆ. ಟೀಸರ್ ನೋಡಿ ಸಖತ್ ಟೇಸ್ಟ್ ಗುರು ಅಂತ ಹೇಳ್ತಿರೋರಿಗೆ ಅಸಲಿ ಪಿಕ್ಚರ್​ನಲ್ಲಿ ಮತ್ತಷ್ಟು ಟೇಸ್ಟ್​ನ ಉಣಬಡಿಸೋದು ಕನ್ಫರ್ಮ್​.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES