Monday, December 23, 2024

ಬಟ್ಟೆ ಖರೀದಿಸಿ ದುಡ್ಡು‌ ಕೊಡದೇ ಯುವತಿ ಪರಾರಿ

ದಾವಣಿಗೆರೆ : ಖತರ್ನಾಕ್​​ ಕಳ್ಳಿಯೋರ್ವಳು ನಯವಾಗಿ ಅಂಗಡಿ ಮಾಲೀಕನನ್ನು ಯಾಮಾರಿಸಿದ್ದಾಳೆ. ಬಟ್ಟೆ ಬೇಕು ಎಂದು 2 ಬ್ಯಾಗ್​ ತುಂಬಾ ಬಟ್ಟೆ ಖರೀದಿ ಮಾಡಿದ್ದಾಳೆ. ಆದರೆ ನೆಟ್​​ ಬ್ಯಾಂಕಿಂಗ್​​ ವರ್ಕ್​​ ಆಗ್ತಾ ಇಲ್ಲಾ ಕೆಲ ನಿಮಿಷದಲ್ಲಿ ಬಂದು ಹಣ ವಾಪಾಸ್​ ನೀಡ್ತೀನಿ ಎಂದವಳು ಮರಳಿ ಅಂಗಡಿಗೆ ವಾಪಾಸ್ ಬಾರದೆ ವಂಚಿಸಿದ್ದಾಳೆ.

ಬಟ್ಟೆ ಖರೀದಿ ಮಾಡಿ ದುಡ್ಡು‌ ಕೊಡದೇ ಯುವತಿಯು ಪರಾರಿಯಾದ ಘಟನೆ ದಾವಣಗೆರೆ ನಗರದ ನಿಟ್ಟುವಳಿಯಲ್ಲಿನ A2 ಫ್ಯಾಷನ್ ಅಂಗಡಿಯಲ್ಲಿ ನಡೆದಿದೆ. 2600 ಬೆಲೆ ಬಾಳುವ 3 ಟೀ ಶರ್ಟ್, 3 ಬರ್ಮೋಡ ಖರೀದಿಸಿದ ಯುವತಿ‌ಯು ಫೋನ್ ಪೇ ವರ್ಕ್ ಮಾಡುತ್ತಿಲ್ಲ ಸ್ಕೂಟಿಯಲ್ಲಿ ದುಡ್ಡಿದೆ ಎಂದು ಹೇಳಿ ಪರಾರಿಯಾಗಿದ್ದಾಳೆ. ಯುವತಿಯ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ KTJ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES