Monday, December 23, 2024

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಘ್ನಗಳ ಮೇಲೆ ವಿಘ್ನ.!

ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಿಲ್ಲೊಂದು ವಿಘ್ನಗಳು‌ ಎದುರಾಗುತ್ತಲಿದೆ. ಯಾವಾಗ ಸಮ್ಮೇಳನ ನಡೆಸಬೇಕು ಎನ್ನುವ ಗೊಂದಲ ಒಂದು ಕಡೆಯಾದ್ರೆ ಮತ್ತೊಂದೆಡೆ ಸಮ್ಮೇಳನ ನಡೆಸುವ ಸ್ಥಳದ ಬಗ್ಗೆಯು ಈಗ ವಿವಾದ ಹುಟ್ಟಿಕೊಂಡಿದೆ.

ಹಾವೇರಿಯ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಸುಮಾರು 26 ಎಕರೆ ಖಾಲಿ ಜಾಗದಲ್ಲಿ ಸಮ್ಮೇಳನ ನಡೆಸಲು ನಿರ್ಧಾರ ಮಾಡಲಾಗಿದೆ. ಆದ್ರೆ ಈ ಸ್ಥಳದ ವಿವಾದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದೆ. ಸುವರ್ಣಕಾರರ ನಿವೇಶನದಾರರ ಹಿತರಕ್ಷಣಾ ಸಮಿತಿಯ 118 ಜನ ಹಾಗೂ ಸುವರ್ಣಕಾರರ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘದ ನಡುವಿನ‌ ವಿವಾದ ನ್ಯಾಯಾಲಯದಲ್ಲಿದೆ.

ಇದೆ ಸ್ಥಳದಲ್ಲಿ ಸಮ್ಮೇಳನ ನಡೆಸುತ್ತಿರೋದರಿಂದ ನಮ್ಮ ಒಪ್ಪಿಗೆ ಪಡೆಯದೆ ಕಾನೂನು ಬಾಹಿರ ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಒಪ್ಪಿಗೆ ಪಡೆಯಬಾರದೆಂದು ಸುವರ್ಣಕಾರರ ಹಿತರಕ್ಷಣಾ ಸಮಿತಿಯ 118 ಜನರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಒಂದು ವೇಳೆ ತಮ್ಮಿಂದ ಒಪ್ಪಿಗೆ ಮಂತ್ರಿಗಳು ಪಡೆಯದಿದ್ರೆ, ಸಾಹಿತ್ಯಪರಿಷತ್ ಅಧ್ಯಕ್ಷರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡ್ತಿವಿ ಎಂದು ಹೇಳಿದ್ದಾರೆ.

ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶವಿದೆ.‌ ಆದ್ರೆ ಕೆಲವರು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಕಟ್ಟಡ ಮತ್ತು ಶೆಡ್​​ಗಳ ನಿರ್ಮಾಣ ಮಾಡಿದ್ದು, ಇವುಗಳನ್ನ ತೆರವುಗೊಳಿಸಬೇಕೆಂದು ಜಿಲ್ಲಾಡಳಿತಕ್ಕೆ ಸುವರ್ಣಕಾರರ ಹಿತರಕ್ಷಣಾ ಸಮಿತಿಯವರು ಮನವಿ ಮಾಡಿದ್ದಾರೆ.

ಸಮ್ಮೇಳನ ನಡೆಸುವುದಕ್ಕೆ ನಮ್ಮ ತಕರಾರಿಲ್ಲ, ಆದ್ರೆ ನಮ್ಮ ಭೂಮಿಯಲ್ಲಿ ಸಮ್ಮೇಳನ ನಡೆಸುವಾಗ ನಮ್ಮ ಒಪ್ಪಿಗೆ ಪಡೆಯಬೇಕು. ಅದರ ಹೊರತಾಗಿ ಬೇರೆ ಕಾನೂನು ಬಾಹಿರ ಸಂಘ, ವ್ಯಕ್ತಿಗಳಿಂದ ಒಪ್ಪಿಗೆ ಪಡೆಯಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಿದ್ದಾರೆ.

ಒಂದು ಕಡೆ ಸರಿಯಾದ ದಿನಾಂಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿಗದಿಯಾಗ್ತಿಲ್ಲ ಎನ್ನುವ ಗೊಂದಲ್ಲಿರುವ ಜಿಲ್ಲಾಡಳಿತ ಹಾಗೂ ಸಾಹಿತ್ಯ ಪರಿಷತ್ ನವರಿಗೆ ಈಗ ಈ ವಿವಾದ ಮತ್ತೊಂದು ಸಂಕಷ್ಟವನ್ನ ತಂದೊಡ್ಡಿದೆ.

ವೀರೇಶ ಬಾರ್ಕಿ, ಪವರ್ ಟಿವಿ ಹಾವೇರಿ.

RELATED ARTICLES

Related Articles

TRENDING ARTICLES