Wednesday, January 22, 2025

‘ಕಾಂತಾರ’ ಕಥೆಗೆ ಮಾರುಹೋದ ಪದ್ಮಾವತಿ

ಬೆಂಗಳೂರು: ಸ್ಯಾಂಡಲ್​ವುಡ್​ನ ನಟ ರಿಷಬ್​ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಕಾಂತಾರ ಸಿನಿಮಾ ನಿನ್ನೆ ಥೆಯಟರ್​ಗೆ ಅಪ್ಪಳಿಸಿದ್ದು, ಸಿನಿಮಾ ಪಂಡಿತರ ಮಾತುಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇತ್ತೀಚಿಗೆ ಮೋಹಕ ತಾರೆ ರಮ್ಯಾ ನಾನು ಕಾಂತಾರ ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದಿದ್ದರು. ಈಗ ಕಾಂತಾರ ಸಿನಿಮಾವನ್ನ ನಿನ್ನೆ ತಡರಾತ್ರಿ ನಟಿ ರಮ್ಯಾ ವಿಕ್ಷೀಸಿದ್ದು, ಈ ಸಿನಿಮಾ ನೋಡಿ ಹೇಳಲು ಪದಗಳು ಸಾಲುತ್ತಿಲ್ಲ ಎಂದು ಕಾಂತಾರ ಕಥೆಯನ್ನ ಹೊಗಳಿದ್ದಾರೆ.

ಈ ಸಿನಿಮಾದ ಕಥೆ ಅಭಿಮಾನಿಗಳ ಮನಸ್ಸನ್ನ ಕಲಕುತ್ತದೆ. ವಿಶೇಷವಾಗಿ ಭೂತ ಕೋಲದ ಬಗ್ಗೆ ಹೆಚ್ಚಿಗೆ ಕಾಡುತ್ತದೆ. ರಿಷಬ್​ ಶೆಟ್ಟಿ ಅವರು ಕಾಂತಾರದಲ್ಲಿ ತಮ್ಮ ನಟನೆ ಮೀರಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಮೊತ್ತೊಂದು ನಿರೀಕ್ಷಿತ ಮಟ್ಟದ ಕಥೆಯನ್ನ ಈ ಸಿನಿಮಾ ತಂಡ ಈ ಮೂಲಕ ತಂದಿದೆ ಎಂದು ಕಾಂತಾರ ಸಿನಿಮಾ ಬಗ್ಗೆ ನಟಿ ರಮ್ಯಾ ಮೆಚ್ಚುಗೆ ಮಾತುಗಳನ್ನ ಆಡಿದ್ದಾರೆ.

RELATED ARTICLES

Related Articles

TRENDING ARTICLES