Wednesday, January 22, 2025

ಉಚಿತ ಪಡಿತರ ಯೋಜನೆ ವಿಸ್ತರಿಸಿದ ಕೇಂದ್ರ ಸರ್ಕಾರ.!

ನವದೆಹಲಿ: ಉಚಿತ ಪಡಿತರ ಯೋಜನೆಯನ್ನು ಇನ್ನೂ ಮೂರು ತಿಂಗಳು ಹಂಚಿಕೆ ಮಾಡಲು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಯೋಜನೆಯನ್ನು 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರದಿಂದ ಪ್ರಾರಂಭಿಸಲಾಯಿತು. ಯೋಜನೆಯ ಅಡಿಯಲ್ಲಿ, ಬಡವರಿಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.

ಪ್ರಸ್ತುತ ಸೆಪ್ಟೆಂಬರ್ ಅಂತ್ಯಕ್ಕೆ ಉಚಿತ ಪಡಿತರ ಹಂಚಿಕೆ ಯೋಜನೆ ಮುಕ್ತಾಯಗೊಳ್ಳಲಿತ್ತು. ಈಗ ಈ ಯೋಜನೆಯನ್ನ ಮತ್ತೆ 3 ತಿಂಗಳು ವಿಸ್ತರಿಸಿ ಅಶ್ವಿನಿ ವೈಶ್ನವ್​ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES